(ಮಂಗಳಾರತಿ)
ಸೂರ್ಯ ಪಾದಾ ಚ೦ದ್ರ ಪಾದಾ
ಕಡಲ ನಾದಾ ಮಂಗಳಾ
ಆದಿ ರೇಣುಕ ವೇದ ಘೋಷಾ
ಭುವನ ಭಾಸ್ಕರ ಮ೦ಗಳಾ
ಅತ್ತ ಅಗೋ ವೀರಭದ್ರಾ
ರುದ್ರ ತಾಂಡವ ಮಂಗಳಾ
ಇತ್ತ ಇಗೋ ಢಮರು ಢಮರುಗ
ಭುವನ ಭೈರವ ಮಂಗಳಾ
ಜ್ಞಾನ ಯೋಗಿಯೆ ಪ್ರೇಮ ರಾಜ್ಯವೆ
ನಾದ ಬಿಂದುವೆ ಮಂಗಳಾ
ಚೈತ್ರ ಲಿಂಗದ ಕ್ಷೇತ್ರ ನಾಥನೆ
ಲಿಂಗ ಜಂಗಮ ಮಂಗಳಾ
ಶರಣು ಹಸಿರಿಗೆ ಶರಣು ಹೂವಿಗೆ
ಉಘೇ ರೇಣುಕ ಶಂಭುವೆ
ಶರಣು ತಾಯಿಗೆ ಶರಣು ತಂದೆಗೆ
ಉಘೇ ವಿಶ್ವದ ಬ೦ಧುವೆ
*****



















