ಗುರುವೆ ನಿಮ್ಮ ಚರಣ ತುಂಬಿ
ತುಂಬಿ ಹೂವು ಅರಳಿತು
ನಿಮ್ಮ ಸ್ಮರಣ ಸವಿವ ದುಂಬಿ
ಜೀವ ಸ್ಫೂರಣ ಪಡೆಯಿತು
ಕಲ್ಲು ಕೊರಡು ಕಮಲವಾಯ್ತು
ಮನೆಯು ಮಂದಿರವಾಯಿತು
ಆತ್ಮದೀಪ ದೇವ ದೀಪ
ಜ್ಯೋತಿ ರೂಪ ಪಡೆಯಿತು
ಮನದ ಮಾನಸ ಸರೋವರದಲಿ
ರಾಜ ಹಂಸೆಯು ತೇಲಿತು
ಮಳಲು ಹೋಗಿ ಹವಳವಾಯ್ತು
ಅಂತರಾತ್ಮ ಬೆಳಗಿತು
ತಂಪು ಗಾಳಿ ಕಣ್ಣು ತುಂಬ
ಪ್ರೀತಿ ಮ೦ಚ ತೂಗಿತು
ಅಂಗ ಅರಳಿತು ಲಿಂಗ ಬೆಳಗಿತು
ವಿಶ್ವ ಜ೦ಗಮವಾಯಿತು
*****



















