ಸರಸ ಮುಖಿಯರೆ ಬಾರೆ ಸಖಿಯರೆ
ಚಂದ ಚಲುವಿನ ತೋಟಕೆ
ಕಮಲ ಮಲ್ಲಿಗಿ ಜಾಜಿ ಸಂಪಿಗಿ
ಹೂವು ಎತ್ತಿರೆ ಗುರುವಿಗೆ||
ರಾಜ ರಂಭಾಪುರಿಯ ಗುರುಗಳು
ಇಕೋ ಗುರುಕೇದಾರರು
ಶ್ರೀಶೈಲದ ಉಜ್ಜಯಿನಿಯ
ಕಾಶಿ ಕ್ಷೇತ್ರದ ಶ್ರೇಷ್ಠರು
ಕಡಲು ಉಡುಗೆಯ ಮಾಡಿ ತೊಟ್ಟರು
ಭುವನ ಪೀಠಕೆ ಕುಂತರು
ಸೂರ್ಯ ಚಂದ್ರರ ಉಂಗ್ರ ಮುಡಿದರು
ವಿಶ್ವ ಧ್ವಜವನು ಹಿಡಿದರು
ಪಂಚ ಪೀಠಕೆ ಪಂಚ ಲಿಂಗಕೆ
ಪಂಚ ತತ್ವಕೆ ಜಯಜಯಾ
ಪರಮ ಪಂಚಾಕ್ಷರಿಯ ಮಂತ್ರಕೆ
ಪಂಚ ಗುರುವಿಗೆ ಜಯಜಯಾ
*****



















