ಮುಗಿಲ ಲೋಕಕೆ ಮೌನ ಲೋಕಕೆ
ಲಿಂಗ ತತ್ವಕೆ ಸ್ವಾಗತಂ
ಶೂನ್ಯದಾಚೆಯ ಮಹಾ ಮೌನಕೆ
ಜ್ಯೋತಿ ಲಿಂಗಕೆ ಸ್ವಾಗತಂ
ಜಡವು ಜ೦ಗಮವಾಗಿ ಅರಳಿತು
ಪರಮ ಗುರುವಿಗೆ ಸ್ವಾಗತಂ
ತಪವು ತು೦ಬಿತು ತಂಪು ತೂರಿತು
ಜ್ಞಾನ ಪೀಠಕೆ ಸ್ವಾಗತಂ
ಉಸಿರು ಉಸಿರಿಗೆ ಲಿಂಗ ಪೂಜೆಯು
ಪ್ರಾಣ ಗುರುವಿಗೆ ಸ್ವಾಗತಂ
ಜನನ ಸು೦ದರ ಮರಣ ಸುಂದರ
ಅಮರ ಗುರುವಿಗೆ ಸ್ವಾಗತಂ
ಆದಿ ಸತ್ಯಕೆ ನಾದ ಚೈತ್ರಕೆ
ಪೂರ್ಣ ಲಿಂಗಕೆ ಓಂ ಓಂ
ನಿತ್ಯ ಗುರು ಓಂ ಸತ್ಯ ಶುಭ ಓಂ
ಪೂರ್ಣ ಕುಂಭಕ ಓಂ ಓಂ
*****



















