ಚಿಂತಿ ಯಾತಕ ಸಂತಿ ಯಾತಕ
ಚಿತ್ತ ಚಿನುಮಯ ಓಂ ಓಂ
ಬಾಳೆಹಳ್ಳಿಯ ಲಿಂಗಬಳ್ಳಿಗೆ
ಲಿಂಗಗೊಂಚಲು ಓಂ ಓಂ
ಮಾತು ಮುಗಿಯದು ಶಬ್ದ ಸಾಲದು
ನೋಡು ಜ್ಞಾನದ ಎತ್ತರಾ
ಸತ್ಯ ಶ್ರೇಷ್ಠರು ಸಾರುತಿರುವಾ
ಲಿಂಗತತ್ವವೆ ಉತ್ತರಾ
ವೇದ ಆಗಮ ಗೀತ ಶಾಸ್ತ್ರದ
ಗಂಟು ಗದಡಿಯ ಒಡೆದರು
ಸಿಡಿಲ ಬಳ್ಳಿಯ ಗುಡುಗು ಹಿಡಿದರು.
ಕಡಲ ಕತ್ತಲೆ ಕಡೆದರು
ಆ ಹಿಮಾಲಯ ಈ ಶಿವಾಲಯ
ಲೋಕ ಲೋಕಕೆ ಓಂ ಓಂ
ಅನ್ನ ಓಂ ಓಂ ಅರುಹು ಓಂ ಓಂ
ಯೋಗ ತೊಟಿಲು ತೋಂ ತೋಂ
*****