Home / Kavana

Browsing Tag: Kavana

ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...

ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು ನಿನ್ನ ಗುಡಿ ಗೋಪುರದ ಕಾಂತಿಯನು ಬೆಳಗುತಲಿ ದ್ವಿ...

ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ ಮಾಡಿಽಽಽ || ನನಪುಗಳ ಸಿರಿ ಸೂರೆಯಲಿ ಗೆಳ...

ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು ನೀನು, ಅಜಮಿಳನು ನಾನು ದೈವನು ನೀನು, ದೇಹಿಯು ನಾನು|| ಸಾಗರನು ನೀನು,...

ನೂರು ನೋವ ಅಳಿಸಿ ಹಾಡು ನಲಿವ ನೀಡಿ ತಣಿಸಿ ಮನವ ಹಾಡು ಹಾಡಿದೆ || ಪ್ರೀತಿ ಎಂಬ ಹೂವ ಕಟ್ಟಿ ಮಾಲೆ ಹಾಕಿ ಮಣಿಸಿ ಮಾತು ನಿನ್ನ ಕರೆದಿದೆ || ಬಯಕೆ ತಂಪು ಕಂಪನೊಸೆದು ಹಸಿರು ಬಾಳ ಸಸಿಯ ನೆಟ್ಟು ಚೆಲುವನರಸಿದೆ || ಜನುಮ ಜನುಮ ಬಂಧ ಚೆಂದ ಅಂದ ಆನಂದ ತ...

ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****...

ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯ...

1...2728293031...147

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...