ಪ್ರಿಯತಮನೆ ನಾ ನಿನ್ನ
ಪ್ರೇಮದುಮ್ಮಾನದಲಿ
ಕಳೆದ ಆ ಸರಿದಿನಗಳ ನೆನೆದು
ಬರೆದೆ ನನ್ನೆದೆಯ ಪುಟಪುಟಗಳಲಿ ||

ನನ್ನ ಅಂದಿನ ಕೆಳೆಯ ಭಾವವ
ಅರಿಯಲಿಲ್ಲ ನೀನು ಮರೆತು
ದೂರ ಹೋದೆ ಗೆಳೆಯಾ
ನನ್ನ ಹೊಂಗನಸುಗಳ ಸೂರೆ ಮಾಡಿಽಽಽ ||

ನನಪುಗಳ ಸಿರಿ ಸೂರೆಯಲಿ
ಗೆಳೆಯಾ ಅಡಗಿ ಹೋದ ನೀನೆಲ್ಲವನು
ಇದೆಯರಲಿ ಮತ್ತಿನಾವ ಹೊಸತು
ಕನಸು ಕಳೆಯಿತೂ ನಿನಗೆಽಽಽ ||

ಅಂದು ಮುತ್ತಲ್ಲಿ ಸಿಂಗರಿಸಿ
ಕೊರಳ ಬಳಸಿ ಬಂಗಾರದ
ಗಿಳಿ ಎದೆಯ ಚಿವುಟಿ
ಮರೆತೆ ನೀನು ಇಬನಿ ಕರಗಿದಂತೆ ||

ಹಕ್ಕಿಯಂತೆ ಹಾರಿತೇ ಸದ್ದಡಗಿ
ನೆನಪುಗಳ ಸುಳಿಯಲ್ಲಿ ಸುಳಿದೂ
ನಾ ಬರೆದ ಪುಟ ಪುಟಗಳಲಿ
ತುಂಬಿಹುದು ಪ್ರೀತಿಯ ನೆರಳು ||
*****