Home / ತಿರುಮಲೇಶ

Browsing Tag: ತಿರುಮಲೇಶ

ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ ಕೊಟ್ಟು ಕುಳಿತಲ್ಲೆ ಒಡ್ಡೋಲಗ ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ ಉಸಿರು ಬಿಗಿಹಿಡಿದು ಗೆದ್ದ ಕಾಳಗ ಇನ್ನಿಲ್ಲವೆಂಬ ಅಶ್ವಮೇಧ ಯಾಗ ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ ಅದೇನು ಭಗ್ಗನೆ ಉರಿವ ಪಂಜ...

ವ್ಯಾಸರ ಪರಂಪರಾಗತ ಕಾಮುಕನಲ್ಲ ಈ ಕೈಲಾಸಂ ವಿರಚಿತ ಕೀಚಕ ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು- ದ್ದೀಪದಲಿ ಹೊಳೆವನು ಚಕಚಕ ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ ಅವಳಿಂದಲೇ ಆಗಲವಮಾನ ತನ್ನ ಸಾವನು ತಾನೇ ಬಯಸಿದವನು ಹಳಿವನೇನು ಬಲಭೀಮನ? ತೊಡಲು ಬೇ...

ಪ್ರೀತಿಸುವ ಮರಗಳನ್ನು ಅವು ಒಂಟಿಯಾಗಿರುತ್ತವೆ ಬೀಸುವ ಗಾಳಿಯ ಜತೆಯಷ್ಟೆ ಮಾತನಾಡುತ್ತವೆ ಪ್ರೀತಿಸುವ ಬೆಟ್ಟಗಳನ್ನು ಅವು ಮೌನವಾಗಿರುತ್ತವೆ ಚಳಿಗಾಲದ ಮಂಜಿಗೆ ಹೊದ್ದು ಮಲಕೊಂಡಿರುತ್ತವೆ ಪ್ರೀತಿಸುವ ನದಿಗಳನ್ನು ಅವು ತು೦ಬಿಕೊಂಡಿರುತ್ತವೆ ಕಬ್ಬಿನ ...

ನವ್ಯದಪಿತಾಮಹರೆಂದು ವಿಮರ್ಶಕಜನ ಕಟ್ಟಿದರೂನು ನಿಮಗೆ ಪಟ್ಟ ಏರಲಿಲ್ಲ ನೀವಾ ಅಟ್ಟ ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು ಹಿಡಿದಿರಿ ನಿಮ್ಮದೆ ದಿಕ್ಕು ನೀವು ಸುಮ್ಮನೆ ನಕ್ಕು ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ ಸರ್ವರನು ನಾಚಿಸುವ ತರ ಗ್ರಹಿಸಿದ್ದ...

ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ ದೇವಗಂಗೆಯ ಆಳವೆಷ್ಟು ಹೇಳು ? ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ? ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ ಎಷ್ಟೆಷ್ಟು ಬಾರಿ ಬಂದೆ ಸುತ್ತು? ತೊಯ್ದ ದಂಡೆಯಲಿ ಏನು...

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ– ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯ...

ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ ಇನ್ನು ಯಾರೂ ಇರದ ರೀತಿಯಲ್ಲಿ ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು ಛೋಟಾ ಇಮಾಮನಿಗೆ ಖಾಲಿ ಬೆರಳು ಜನರು ಅತ್ತ ಹಣಿಕುವರು ಇತ್ತ ಹಣಿಕು...

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ– ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...