Home / ಹಾಡುಗಳು

Browsing Tag: ಹಾಡುಗಳು

ಇಂದರ ಹೂ ಚಂದರ ಹೂ ಚೆಂದ ಚೆಂದದ ಹೂ ತಂದು ಇಟ್ಟೇನೀಗ ನಿನಗಂತ, ಸುಂದರಿ. ಕಣ್ಣು ಸೋತ್ಯು ಹಾದೀ ನೋಡಿ; ಮನ ಸೋತ್ಯು ಚಿಂತೀಮಾಡಿ; ನಾಲ್ಗಿ ಸೋತ್ಯು ಹಾಡಿಹಾಡಿ; ನಿನ ಹಾಡು, ಸುಂದರಿ ಚಿಗರಿ ಸಂಗಾತ ಆಟ ಎಡಕ ಬಲಕ್ಕ ನೋಟ ಬರಬ್ಯಾಡ ಮಾಡುತ ಬ್ಯಾಟಾ ಬೇಗ ...

ಚುಮು ಚುಮು ನಸುಕಿನಲಿ ಹೂವುಗಳರಳುವವು ಅಂದವ ತೋರಿ ಸುಗಂಧವ ಬೀರಿ ಸಂಜೆಗೆ ತೆರಳುವವು. ಅದೆ ಹೊಸ ಹರೆಯದಲಿ ಆಸೆಯು ಮೊಳೆಯುವದು ಹೂತು ಕಾತು ಹಣ್ಣಾತು ಬೀತು ಮುಪ್ಪಿನಲಳಿಯುವದು. ಗಾಳಿಯ ಗತಿಯಲ್ಲಿ ದುಃಖದ ಸುಳಿವಿಲ್ಲ ಚಿಕ್ಕಮಕ್ಕಳೂ ನಕ್ಕ ನಗೆಯಲೂ ಸು...

ಮಣ್ಣು ಮುಕ್ಕುವ ಹುಲ್ಲು ಬೀಜದಂತೆಲ್ಲವೂ ಮಳೆಯೊಡನೆ ಮೊಳೆಯಬಹುದು; ನೀರ ಹೊಗೆಯನು ಮಾಡಿ, ಮೈ ನೀರ ಹರಿಸುವಾ ಬಿಸಿಲಿನಲ್ಲೊಣಗಲಹುದು. ಕವಿಲೀಲೆಯಂತೆ ಎಲೆ ಕೂಸೆ, ಲಲಿತಾ! ನಿನ್ನ ಒಂದುವರೆ ತಿಂಗಳಿನ ಕುನ್ನಿ ಬಾಳು; ತಲೆದೋರಿ ಮೈವೆತ್ತು ಕಣ್ಣು ತೆರೆಯ...

ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು ಯಾರಿಗೂ ಮೋಹನವ ಮಾಡಲಾಪವು! ಕಂದ ಕಾರಿಬಾರಿಗಳಂತೆ ಸರಿಮಾಡಿದ ಸುಖವು ಎಲ್ಲಡಗಿತೀಗ ಎಲ್ಲ? ನಾರಾಯಣಾ ! ಅಹಹ ! ಎಂಥ ಕೋಮಲ ಜೀವ! ವಾರಿಜದವೋಲ್ ಮಂಜಿನಿಂದ ಮರಣವು ಬಂತೆ ! ಪಾರಿಜಾತದ ಹೂವಿನಂತೆ ಮುಟ್ಟಿದ ಒ...

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...

೧ ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು ಹೊಟ್ಟೆಯಲ್ಲಿ ಬಂದವರ ಚಿಂತೆಯು ಬೆನ್ನು ಬಿದ್ದು ಬಂದವರ ಚಿಂತೆಯು ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು ಕೈಯ ಹಿಡಿವರಾರೆಂಬ ಚಿಂತೆಯು; ಹಿರಿಯರಂಜಿಕೆಯ ಹಿರಿದು ಚಿಂತೆಯು ನೆರೆಯ ಹೊರೆಯವರ ಹೊರದ ಚಿಂತೆಯು ಬದುಕು ...

ನಗುವಿರಲಿ ಅಳುತಿರಲಿ ಎರಡನ್ನು ನಂಬೆ. ನಗೆ ನಂಜು ಅಳು ಮಂಜು ಇದೀತು ಎಂಬೆ. ಮಾತಿರಲಿ ಇರದಿರಲಿ ಎರಡು ಸಮ ತಾನು. ಇದು ಮರುಳು ಅದು ಹುರುಳು ಇರಲಾರದೇನು? ಹೊರಗೊಂದು ಒಳಗೊಂದು ಲಕ್ಷಣವು ಸಾಕು. ಹಾಗೇನು? ಹೀಗೇನು? ಲಕ್ಷ್ಯವೇ ಬೇಕು. *****...

ನನ್ನ ಪಾಡ ತೊಡುವಲ್ಲಿ- ದನಿ ಕುಗ್ಗಿತು, ಬಾತವು ಕಣ್ಣು; ನಿನ್ನ ನಾಡ ನೋಡುವಲ್ಲಿ- ಗಮಗಮ ಹೂ, ಸೀ-ಸವಿ ಹಣ್ಣು ಕೆಂಡ-ಬೆಂಕಿ ಕಂಡ ಅಲ್ಲಿ- ಬರಿ ಇದ್ದಿಲು, ಸುಟ್ಟಿಹ ಬೂದಿ; ಕತ್ತಲಲ್ಲಿ ಕಣ್ತೆರೆದರು- ಕಿಡಿ ಬೆಳಕಿಗು ಸುತ್ತಲು ಹಾದಿ; ನೆರೆಹಾವಳಿ ಮೆ...

ದೊಡ್ಡವರದೆಲ್ಲವೂ ದೊಡ್ಡದೆಂಬುವ ಮಾತು ಸುಳ್ಳಲ್ಲ! ಶ್ರವಣ ಬೆಳಗುಳದಲ್ಲಿ ಒಂದು ಸಾ- ವಿರ ವರುಷ ನಿಂತ ಗೊಮ್ಮಟ! ವಿಜಯನಗರದ- ಲ್ಲಿರುವ ಸಾಸಿವೆ ಗಣಪ! ವಿಜಯಪುರದೊಳಗೀಗು ಆಡಿದ್ದ ನಾಡಾಡಿ ಏಳೇಳು ಸಲ ನಲಿವ ಗೋಳಗುಮ್ಮಟ! ಚೆನ್ನ ಕೇಶವನ ಕಣ್ಣಿದಿರು ಕುಣ...

ಕುಣಿ ಕುಣಿ, ನವಿಲೇ, ಕುಣೀ ಕುಣೀ ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ, ಕುದಿವುದು ಮೋಡವು, ತೊಟ್ಟಿಡದಿದೆ ಮಳೆ, ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ, ತಾಪವ ನೀ ಮರೆ, ಕುಣಿ ಕುಣೀ || ೧ || ನಿನಗಿದೆ ಸಾವಿರ ಕಣ್ಣಿನ ಛತ್ರ, ಮೂಲೋಕಕು ಬೀಸಣಿ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...