
ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ- ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು; ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದ...
ವಿಜಯ ವಿದ್ಯಾರಣ್ಯ ನೀನೆ ಧನ್ಯ || ಮೈಯೆಲ್ಲ ಕಣ್ಣುಳ್ಳ ಮುಂದಾಳು ಬೇಕು| ಕುರುಡುಬಳ್ಳಿಯ ಮೆಳ್ಳ ನಾಯಕರು ಸಾಕು || ಈಸಗುಂಬಳ ಜೊತೆಯು ಬೇಕು, ಈಸುವರೆ, ! ಪಾತಾಳಕೊಯ್ಯುವಾ ಕಲ್ಲನರಸುವರೇ ? || ಯೋಗಿ, ನಿನ್ನೊಲು ನೀನು ! ದೊರೆಯನನ್ಯ | ವಿಜಯ ವಿದ್ಯ...
೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...
ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ! ಭೂತಜಾತಂಗಳಿಗೆ ಈ ಜಗದ ದುಃಖಗಳ ಆತಂಕಗಳ ಮರೆವುಮಾಡಿ, ಮನದೊಳಗಾವ ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು “ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ, ಮಾತೆಯಂತವನನ್ನು ಹಾಡಿ ಮಲಗಿಸಿ;...
ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್‍ಲೋಕವನು, ಹರ...
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...














