Home / Savitha Nagabhushana

Browsing Tag: Savitha Nagabhushana

ಹುಡುಗಿ ದಿನಚರಿ ಬರೆಯುತ್ತಾಳೆ. ಸುಂದರ ಹಗಲುಗಳ ಇಂಚಿಂಚನ್ನೂ ವರ್ಣರಂಜಿತ ಪುಟಗಳಲ್ಲಿ ಸೆರೆಹಿಡಿಯುತ್ತಾಳೆ. ನೂರೆಂಟು ಬಾರಿ ಯೋಚಿಸಿದರೂ ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು ಬರೆಯಲಾಗದೆ ಮಿಡುಕುತ್ತಾಳೆ. ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊ...

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮ...

ಅದೇ ನೆಲ ಅದೇ ಜಲ ಎದೆ ಸೀಳಿ ಹೊರಬಂದ ಚಿಗುರುಗಳ ಮತ್ತದೇ ಹಳೆಯ ಬೀಜದ ಫಲ ಅಲ್ಲಿ…. ಇಲ್ಲಿ…. ಗಾಳಿಗುಂಟ ತೇಲಿಬಂದ ಹೊಸತನದ ವಾಸನೆ ಕುಡಿದು ಅಮಲಿನಲ್ಲಿ ತಲೆಕುಣಿಸಿ ತೊನೆದಾಡುವ ಶೈಲಿ- ಹಳೆಯದನ್ನೆ ಹೊಸದಾಗಿ ನೋಡುವ ವಿಚಿತ್ರ ಖಯಾಲಿ ಸಂಭ್ರಮಿಸಿ ಎತ್...

ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ...

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದ...

ನೀವು ನಗೆ ದೀವಟಿಗೆಗಳನ್ನು ಖರೀದಿಸುತ್ತೀರಾ? ನೀವು ಚಿಗಿತ ಆಸೆಗಳನ್ನು ಖರೀದಿಸುತ್ತೀರಾ? ನೀವು ಕುಪ್ಪಳಿಸುವ ಕನಸುಗಳನ್ನು ಖರೀದಿಸುತ್ತೀರಾ? ಹಾಗದರೆ ನಮ್ಮಲ್ಲಿಗೆ ಬನ್ನಿ. ನಮ್ಮಲ್ಲಿ ಲಾಟರಿ ಟಿಕೇಟು ಮಾರುವ ಪುಟ್ಟ ಹುಡುಗರಿದ್ದಾರೆ. ಕಣ್ಣಲ್ಲೆ ಕ...

‘ಪ್ರೀತಿ’ ಅದೇನು? ಎಂದು ಯಾಕೆ ಕೇಳುತ್ತೀರಿ? ಕಡಲನ್ನು ನೋಡಿದ್ದೀರಾ? ಹಾಗಾದರೆ ಸುಮ್ಮನಿರಿ. ‘ಪ್ರೀತಿ’ ಪರಿಚಯಿಸಿ ಅಂದಿರಾ? ತುಂಬಾ ಸುಲಭ. ಒಮ್ಮೆ ಆಗಸವನ್ನು ಕಣ್ಮುಂದೆ ಕರೆಯಿರಿ. ‘ಪ್ರೀತಿ’ ಪ್ರಿಯವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣವಿದೆ, ರ...

(ಪೂರ್ವಾರ್ಧ) ಯಾರಲ್ಲಿ? ಯಾರಿದ್ದೀರಿ? ಬಂದಿದ್ದೇನೆ. ಬಾಗಿಲು ತೆಗೆಯಿರಿ. ಈತನಕ ಇದ್ದಳು, ಈಗಿಲ್ಲ ಎಂದರೆ ಹೇಗೆ ನಂಬಲಿ? ಕಿಟಕಿಗಳ ತೆರೆದುಕೊಳ್ಳಿ ಬಾಗಿಲುಗಳ ತೆರೆದುಕೊಳ್ಳಿ ಬಂದಿದ್ದೇನೆ, ಕರೆದುಕೊಳ್ಳಿ. ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು ...

ಈ ಒಂದು ಕ್ಷಣದ ಹಿಂದೆ…. ನಿನ್ನ ಬಾದಾಮಿ ಕಣ್ಣುಗಳ ಪರಿಚಯ ನನಗಿರಲಿಲ್ಲ. ನಿನ್ನ ಬೆವರಿನ ಪರಿಮಳಕ್ಕೆ ನನ್ನ ಮೂಗು ಅರಳುತ್ತದೆಯೆಂದು ನನಗೆ ಗೊತ್ತಿರಲಿಲ್ಲ. ಈ ಒಂದು ಕ್ಷಣದ ಹಿಂದೆ…. ನಿನ್ನ ಬೆಚ್ಚನೆಯ ಎದೆಯಲ್ಲಿ ಮರೆತ ಸಂಗತಿಗಳಿರುತ್ತವೆ ಎಂದು ನನ...

ಕನಸು, ಕಾಮನಬಿಲ್ಲಿನಲ್ಲಿ, ಜೂಗಳಿಸುವ ಗಿಡಮರ ಬಳ್ಳಿ ಹೂವಿನಲ್ಲಿ, ಚುಕ್ಕಿ ಚಂದ್ರಮರ ನಗೆ ಬೆಳದಿಂಗಳಿನಲ್ಲಿ, ಹೊರಳುವ ಅಲೆಯ ಏರಿಳಿತ ಲಯಬದ್ಧ ಸಂಗೀತದಲ್ಲಿ, ಮಗ್ಗುಲಾದ ಮುಂಜಾವಿನ ಅರಳು ನೋಟದ ಬೆಳಕಿನಲ್ಲಿ, ಚಿಲಿಪಿಲಿ ಸಂಗೀತದಲ್ಲಿ ಮುಕ್ಕಳಿಸಿ ನಗ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...