Home / Kasturi Bayari

Browsing Tag: Kasturi Bayari

ಮೊನ್ನೆ ಸುರಿದ ಭಾರಿ ಮಳೆಗೆ ಮನೆ-ಮನೆಗಳು ಒಡೆದು ಬಯಲು ಆಲಯವಾಯ್ತು ಸುತ್ತಿ ಸುಳಿದು ತಿರುಗಿದ ಇತಿಹಾಸ ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ ಕೊಳ್ಳಗಳು ವಿಕಾರಗಳಾದವು. ಅನ್ನ, ಹಸಿವು ನೀರು ನೀರಡಿಕೆ ಕರುಳಿಗೆ ಅಂಟಿಕೊಂಡ ಮಕ್ಕಳು ದಿಕ್ಕು ದಿಸೆಯಿಲ್...

ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...

ನಡೆವ ದಾರಿಯಲಿ ಹೆಜ್ಜೆಗಳು ಮೂಡಲಿಲ್ಲ ಅನುರಣಿಸಿತು ಸಪ್ಪಳ ನಡೆವ ದಾರಿಯ ಇಕ್ಕೆಲಗಳಲಿ ಬಯಲ ಬಿಂಬ ದಾರಿಗೆ ಇಂಬು ಹುಡುಕಾಟದ ಬಯಲಿನಲಿ ಖಾಲಿಯಲಿ ತುಂಬಿಕೊಂಡ ಹಸಿರು. ಬೆಳಕಿಗಾಗಿ ಕಂದೀಲನ ಮರೆಮಾಚಿ ದೇಹ ಹೊತ್ತವರ ಹರಿದಾಟ ಇರುಳ ಮೆಲ್ಲಗೆ ಕಂಪ ಮರೆತು...

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ ತಂಗಾಳಿ ತೀಡಿ ಹಾಸಿತು ಕಣ್ಣ ತುಂಬ ನಿದ್ದೆ ಗುಂಗು ಹರಡಿತು....

ಸದ್ದಿಲ್ಲದೇ ಅರಳಿದ ಹೂಗಳು ಮರದ ತುಂಬ ಹರಡಿ ಹಾಸಿತು ಜೀವಗಂಧ ಝೇಂಕಾರದಲಿ ದುಂಬಿ ತಂಡ ಗಾಳಿ ಬೀಸಿತು ತಂಪಾಗಿ ಮರದಲಿ ಕುಳಿತ ಹಕ್ಕಿಗಳು ಉಲಿದವು ಇಂಪಾಗಿ. ಗೂಡು ಕಟ್ಟುವ ನೆರಳು ಮಣ್ಣ ಕಣಕಣದಲಿ ಹರಡಿ ಆಳಕ್ಕಿಳಿದ ಕಣ್ಣು ತಾಯಿಬೇರು ನೂರು ರೂಪಕಗಳು ...

ಯುದ್ಧಗಳ ಹಿಂಸೆ ಗದ್ದಲದಲಿ ರಣರಂಗ ರಕ್ತ ಚೆಲ್ಲಿದೆ ಮತ್ತೆ ಗಾಯಾಳುಗಳು ಚೀರುತ್ತಿದ್ದಾರೆ ಸಾವಿನಲ್ಲಿ ನೋವು ಹರಡಿಕೊಂಡಿದೆ ಅಲ್ಲಿ ಖಾಲಿ ಆವರಿಸಿಕೊಂಡಿದೆ. ಘಟಿಸುವ ಘಟನೆಗಳನ್ನು ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು ಇತಿಹಾಸದಲಿ ಹಸಿದ ಕರಳು ಮರೆತ...

ಮೌನದಲಿ ಮರ ಕಂಪಿಸಿ ಒಡಲೊಳು ಜೀವಿಗಳು ಝಲ್ಲನೆ ಮುಲುಕಾಡಿ ಮರು ಮುಂಜಾನೆ ಯಾವ ಹಂಗಿಲ್ಲದೇ ಚಿಗಿರಿದ ಹಸಿರು ಮೌನದಲಿ ಮಾತುಗಳು ಸುಮ್ಮನೆ ಒಂದಕ್ಕೊಂದು ಡಿಕ್ಕೀ ಹೊಡೆದುಕೊಂಡು ಮೆಲ್ಲನೆ ಚಲಿಸಿದ ಭಾವ ಒಡಲು ಗರ್ಭದ ಕತ್ತಲೆ ರಾತ್ರಿ ಕನಸುಗಳರಳಿದವು. ಮ...

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು ಚಮಚ ...

ಅಮ್ಮ ಪಾತ್ರೆ ಹಿಡಿದು ಬಡಿಸಿದಳು. ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ. ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು. ಅಕ್ಕ ತಬ್ಬಿದಳು ಲೋಕದ ಮಾಯೆಯ ಪ್ರೇಮ ಕರಗಿ ನೀರಾಗಿ ನದಿಯಾದಳು. ತಂಗಿ ಹಂಚಿದಳು ಸ್ನೇಹದ ದಿ...

ಕಲ್ಲು ಮುಳ್ಳಿನ ಹಾದಿ ಸವೆದ ಬದುಕು ಅಳೆಯಲಾರದ ಕಾಲ ಇಂದು ನಿನ್ನೆಯ ನೆನಪುಗಳ ಬಂಧಿ ಬಯಕೆಗಳ ನಾಳೆಗಳ ಆಲಂಗಿಸು ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ. ದುಃಖದ ಸೆರಗಿನಲಿ ಸುಖದ ಮುಖ ತಕ್ಕಡಿ ತೂಗಿದಂತೆ ಸಮ ಸಮ ಆತ್ಮಗಳು ಮುಲುಕಾಡಿ ವಿರಮಿಸುತ್ತವೆ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...