
ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ ತತ್ವಾರ ತಟ್ಟಿ ತಬ್ಬಲಿಯ ಗೂಡು ಎಂದು ನಿಟ್ಟುಸಿರೇ ಉಸಿರಾಗಿತ್ತು. ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ ಸಮಯವೆಲ್ಲಾ ಹನಿಹನಿಯ ಉದುರಿಸಿ ನಯನಗಳು ಕೊಳಗಳಾಗಿತ್ತು. ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು ಬೆರಣಿ ತಟ...
ಅದು ನನ್ನದಲ್ಲದ ಅಂಗಿ ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ. ಬಯಸಿದ್ದು ಕನವರಿಸಿದ್ದು ಅದಕ್ಕಾಗೇ ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು ಅಮ್ಮನ ತಕರಾರು. ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ. ಕಿ...
೧ ಈ ಕದಡಿದ ಕೊಳ ತಿಳಿಯಾಗುವುದಿಲ್ಲ. ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ ೨ ಬಿಳಿತೊಗಲಿನ ಗೋಡೆಯ ಮೇಲೆ ಬೆಳೆಯುತ್ತಿದೆ ಊರು ನಗರ ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ. ೩ ತರು ಲತೆಗಳು ಅಲ್ಲಿಲ್ಲಿ ಬೋ...
ಕರೆಮೊಗೆಯ ಹಿಡಿದು ಹೊರಟೆ ಕೈಗೊಂದಿಷ್ಟು ಗೌರಿಯಾಕಳ ಹಾಲಿನ ತುಪ್ಪ ಸವರಿ ಕರು ಮೆಲ್ಲುತ್ತಿತ್ತು ಹುಲ್ಲು ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು ವಾಸನೆ ಗೃಹಿಸಿ, ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ ತೊಳಕಲು ಅಕ್ಕಚ್ಚು ಮೆಚ್ಚಿಲ್ಲ. ಅಚ್ಚು ಮೆ...
ಮರ ಮರ ರಾಮ ರಾಮ ತರವೇಹಾರಿ ತರಕಾರಿ ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ. ಮುಖಕ್ಕೆ ಆಮ್ಲಜನಕದ ಕೋಶ ಹೊತ್ತ ಲಲನೆಯರು ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ ಕೋಶದ ಹುಡುಕಾಟದಲ್ಲಿ. ಭೂಮಿಮಗನ ಬೆವರಹನಿ ಸುಡು ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ ಜೀರ್...
ಭಾಗ -೧ ಆತನ ಕೃತಿಗಳು ಆತನ ಖಾಸಗಿ ಬದುಕನ್ನು ಪ್ರತಿನಿಧಿಸಿದ್ದವು. ಆತನ ಅಸ್ತವ್ಯಸ್ತ ಆದರೆ ರಮ್ಯ ರಮಣೀಯ ಬದುಕಿನ ಶೈಲಿ ಆತನ ಕೃತಿಗಳನ್ನು ಶ್ರೀಮಂತಗೊಳಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಅಮರಗೊಳಿಸಿತು. ಆತನೇ ಇಪ್ಪತ್ತನೇ ಶತಮಾನದ ಮೇರು ಸಾಹಿತಿ ಡೆವ...
ಅದೊಂದು ಅಸಂಗತ ಸಂಪರ್ಕ ಅಸಂಬದ್ಧ ಯಾರದೋ ಸಂತೃಪ್ತಿ, ಯಾರಿಗೋ ಸೌಭಾಗ್ಯ ಬರೆದ ಬ್ರಹ್ಮನಿಗೇನು ಗೊತ್ತು? ತಾಳತಂತಿಗಳಿಲ್ಲದ ವಾದ್ಯ ನುಡಿಸಲಾಗದು: ಆದರೂ ನುಡಿಸಿದವು ಅರ್ಧಮರ್ಧ, ಅಷ್ಟಕಷ್ಟೆ. ಮತ್ತೆ ಕಳಚಿ ಬೀಳುವ ಹಂತ ಸರಿಗೆಗಳು ಸುತ್ತಿಕೊಳ್ಳುತ್ತ ...
ಜಗದೊಳಗೆ ಹುಟ್ಟಿಬೆಳೆದರೂ ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ. ಇಲ್ಲದ ಮೂಲದಲ್ಲೇ ಹುಟ್ಟಿದರೂ ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು ಇದ್ದರಮನೆಯ ಮಾರಿ ತಿಂದವರು ಇಹರು ಪರಿಪರಿಯ ಪಂಡಿತರು, ಪಾಮರರು, ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದ...














