
ಬದುಕುವುದು ಭೀಕರವೆಂದರೆ ನಿಜವೆನ್ನೋಣ; ಆದರೆ ಸಾವೂ ಭೀಕರವಾಗಬೇಕೆ? ಕರೆದುಕೊಂಡಂತೆ ಸೀತೆಯನ್ನು ಭೂಮಿ ಅಮ್ಮನಾಗಬಾರದೇಕೆ? ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ ಕೆಂಡಮಂಡಲವಾಗಬೇಕೆ? ಸಿಟ್ಟೆಂದರೆ ಎಂಥ ಸಿಟ್ಟು! ಹಾವಂತೆ ಹರಿದಾಡಿದ ಗುಟ್ಟು ಸಾವಿನ ಎಡೆ ...
ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ...
ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊ...















