
ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ ಕನ್ನಡದ ಕಲ್...
ಭೂಮಿ ಒಳಗಿಂದ ಆಕಾಶ ಕಂಡವರು ಆಕಾಶದೊಳಗಿಂದ ಭೂಮಿಯ ಕಡೆದವರು ಕೆಲಸ ಕೊಟ್ಟವರನ್ನು ಮುಂದೆ ತಂದವರು ಕೆಲಸ ಮಾಡುತ್ತಲೇ ಹಿಂದೆ ಉಳಿದವರು. ಮುಟ್ಟಬಾರದು ಎಂದರೂ ಇತಿಹಾಸ ಕಟ್ಟಿದರು ಊಳಿಗದ ಸೆರೆಯಲ್ಲಿ ಉಸಿರನ್ನೆ ಉಂಡವರು ಬೆವರಿನ ಮಸಿಯಲ್ಲಿ ಬದುಕನ್ನು ...
ನಟ್ಟ ನಡು ಇರುಳಲ್ಲಿ ಅರಳಿದ ಹೂವು ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು ನಡುವೆ ಉರಳುವ ಚಕ್ರ ಚಲನೆ ಸಾವಯವ ಮೈಮಾಟದಲ್ಲಿ ಭಾವ ಬುದ್ಧಿಗಳ ಕೂಟದಲ್ಲಿ ಕತ್ತಲ ರಾಣಿಯ ಮಿಂಚಿನ ಪ್ರತಿಮೆ! ಕುಶಲವೆ ನನ್ನ ಕತ್ತಲ ರಾಣಿ? ವಸಾಹತುವಿನ ಹುತ್ತದಲ್ಲಿ ವಿಷವಿ...
ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ ಮೇಲೆ ನೋಡಿದರೆ ನಡುಗುತ್ತಿರುವ ಮೋಡ. ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು ಸಂತೆ ಗದ್ದಲದ ನಡುವೆ ಮೌ...
ಬದುಕುವುದು ಭೀಕರವೆಂದರೆ ನಿಜವೆನ್ನೋಣ; ಆದರೆ ಸಾವೂ ಭೀಕರವಾಗಬೇಕೆ? ಕರೆದುಕೊಂಡಂತೆ ಸೀತೆಯನ್ನು ಭೂಮಿ ಅಮ್ಮನಾಗಬಾರದೇಕೆ? ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ ಕೆಂಡಮಂಡಲವಾಗಬೇಕೆ? ಸಿಟ್ಟೆಂದರೆ ಎಂಥ ಸಿಟ್ಟು! ಹಾವಂತೆ ಹರಿದಾಡಿದ ಗುಟ್ಟು ಸಾವಿನ ಎಡೆ ...














