Home / ಅವಧ

Browsing Tag: ಅವಧ

ದಾರಿ ತೋರಿದವ- ನಭಿಮನ್ಯುವಲ್ಲ ಅಖ್ತರ್ ಹುಸೇನ ಈತ ಒಳ ನುಗ್ಗಿದಂತೆ ಹೊರ ಬರಬಲ್ಲ- ನಾದರೂ ಬೇಕೆಂದೆ ಒಳಗೇ ಉಳಿದಿರುವನು ಎಷ್ಟೋ ಕಾಲದಿಂದ ಸಂದಿಗೊಂದಿಯ ಹಾದು ಕತ್ತಲಿಗೆಡವಿ ಗೋಡೆಗಳ ತಡವಿ ಅಂತೂ ಹೊರಬಂದೆವು ಬಚಾವೆಂದು ನೋಡಿದರೆ ಅಲ್ಲಿ ಮತ್ತವನೆ ಅಖ...

ಹೈದರ್‌ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ ಏನಾಶ್ಚರ್ಯ! ಬಾಲಕನು ಒಮ್ಮೆಲೇ ಮಾತಾಡತೊಡಗಿದನು ಏನು ವ್ಯಾಕರಣ ಶುದ್...

ಅಫಜಲ್‌ಗಂಜಿನಲ್ಲೊಂದು ದಿನ ಅಲ್ಬುಕರ್ಕೆಂಬವನು ತನ್ನ ಆಫೀಸಿನಿಂದ ಮರಳುತ್ತಿದ್ದವನು ಮಾಯವಾದನು ಇದ್ಡಕ್ಕಿದ್ದ ಹಾಗೆ ಚಾವಣಿಯಿಂದ ಹೊಗೆ ನೆಲದಿಂದ ಧಗೆ ಎದ್ದು ಹೋದ ಹಾಗೆ (ಸಿನಿಮಾ ಕತೆಗಳ ಮಾದರಿ) ಆದರಿದು ಮಾತ್ರ ಖಾತರಿ) ಎಲ್ಲಿ ಹೋದನಲಲ್ಬುಕರ್ಕ ಪರ...

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ: ಎಲೆ...

ತಿರುವುಗಳನ್ನು ಬಳಸುತ್ತ ಇಳಿಜಾರುಗಳನ್ನು ಇಳಿಯುತ್ತ ಇಮ್ಮಡಿಸುವ ವೇಗಕ್ಕೆ ಬಂದು ಬಡಿಯುವ ಗಾಳಿ ಸೀಳುವ ದೇಹ ಬಹಳ ಹಗುರ. ಎತ್ತರಗಳಾಚೆ ಏನಿದೆ ಏನಿಲ್ಲವೆಂದು ಗೊತ್ತಿರದ ಆತಂಕ ಹಾಗೂ ಸುಖ ಒಂದು ಮೋಟರ್‌ಬೈಕನ್ನೇರಿ ಸುಮ್ಮನೇ ಹೋಗುವ ಸಹಜ ಮಜ. ಹೊಲಮನೆ...

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ- ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು, ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು ಹಾದು ಹೋಗುತ್ತಲೇ ಇದ್ದುವು. ಎತ್ತಿನ ನಿಧಾನ ಗಾಡಿಗಳು ಸಾಗುತ್ತಲೇ ಇದ್ದುವು. ನಿದ್ರಿಸುವ ನಗರ ಎಚ್ಚರಾಗುತ್ತಿತ...

ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ ಒರ...

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸ...

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...

ರಾಷ್ಟ್ರೀಯ ಶೋಕದ ಹನ್ನೆರಡು ದಿನಗಳೂ ಮುಗಿದುವು- ಒಂದು ಯುಗವೆ ಮುಗಿದಂತೆ ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ ಚೆಲ್ಲಿಯೂ ಆಯಿತು- ನೀನು ಬಯಸಿದಂತೆ ಕೆಂಪು ಕೋಟೆಯ ಬುರುಜುಗಳಿಂದು ಯಮುನೆಯ ಕೆಂಪಿನಲ್ಲಿ ಕದಡಿವೆ ಒಂಟಿ ದೋಣಿಗಳು ನಿಂತಲ್ಲೆ ನಿಂತಿದ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....