Home / ಕವನ / ಕವಿತೆ / ಒಂದು ಮೋಟರ್‌ಬೈಕನ್ನೇರಿ

ಒಂದು ಮೋಟರ್‌ಬೈಕನ್ನೇರಿ

ತಿರುವುಗಳನ್ನು ಬಳಸುತ್ತ ಇಳಿಜಾರುಗಳನ್ನು ಇಳಿಯುತ್ತ
ಇಮ್ಮಡಿಸುವ ವೇಗಕ್ಕೆ ಬಂದು ಬಡಿಯುವ ಗಾಳಿ ಸೀಳುವ ದೇಹ
ಬಹಳ ಹಗುರ. ಎತ್ತರಗಳಾಚೆ ಏನಿದೆ ಏನಿಲ್ಲವೆಂದು
ಗೊತ್ತಿರದ ಆತಂಕ ಹಾಗೂ ಸುಖ ಒಂದು ಮೋಟರ್‌ಬೈಕನ್ನೇರಿ
ಸುಮ್ಮನೇ ಹೋಗುವ ಸಹಜ ಮಜ. ಹೊಲಮನೆಗಳಾಚೀಚೆ
ಅಂಗಳದ ಮುಂದೆ ಒಬ್ಬರೊಬ್ಬರ ತಲೆಬಾಚುವ ಹೆಂಗಸರು
ದೃಷ್ಟಿಯ ಹೊರವಲಯದಲ್ಲಿ ಕಂಡೂ ಕಾಣಿಸದಂತೆ ಮಾಯುವರು.
ಆಕಾಶದ ಅಂಚಿನಲ್ಲಿದ್ದ ದಖ್ಖಣದ ಕೋಡುಗಲ್ಲುಗಳು ಮಾತ್ರ
ಅಷ್ಟು ದೂರವು ಬಂದು ಮನಸ್ಸಿಲ್ಲಿದೆ ಹಿಂದೆ ಸರಿಯುವುವು.

ಜಿಂಕು ತಗಡಿನ ಬಹಳ ಹಳೆಯ ಅಂಗಡಿಯೊಂದು ರಸ್ತೆಯ ಬದಿಗೆ
ಇದ್ದಿಲೊಲೆಯಲ್ಲಿ ನಳನಳಿಸುವ ಕೆಂಡಗಳು ಹಂಡೆಯಲಿ ಕುದಿದು
ಮರಳುವ ನೀರು ಉಗಿಕಾರುವುದು ಗಡಿಬಿಡಿಯಿಂದ ಮಾಲಿಕನು
ಒಂದು ಬಟ್ಟಲು ಚಹಾ ಮಾಡಿ ತಂದಿರಿಸುವನು ಮೇಜಿನ ಮೇಲೆ
ಇಳಿ ಸಂಜೆ. ತಂಪು ಹವೆ. ಹೊಗೆಯಾಡುವ ಚಹವನ್ನು ನಿಧಾನ
ಹೀಗಿರುತ್ತಿದ್ದಂತೆ ನನಗೆ ಸಮಯದ ಪರಿವೆಯಿಲ್ಲ. ಯಾರೂ
ನನಗಾಗಿ ಕಾಯುತ್ತಿಲ್ಲ. ಆದರೂ ಹೊರಡಬೇಕು, ಹೊರಡುವೆನು
ಒಂದ ತುಳಿತಕ್ಕೆ ಆರ್ಭಟಿಸುವುದು ಯಂತ್ರ. ನನ್ನ ಮುಂದೆ
ತಿಳಿಯದ ಹಾದಿ, ಆವರಿಸುತ್ತಿರುವ ಕತ್ತಲೆಯ ಘಾತಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...