Home / Kannada Poetry

Browsing Tag: Kannada Poetry

ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ ಭಾರಿ ಕೊಡುಗೆಯ ಹೀಗೆ ಹಾಳುಮಾಡುವೆ ...

ಸಂಸಾರವೆಂಬುದೊಂದು ನೀರಿನ ತೊಟ್ಟಿ ತುಂಬಲು ಒಂದೇ ನಲ್ಲಿ ಖಾಲಿ ಮಾಡಲು ಹಲವು. ತುಂಬಲು ದೊಡ್ಡ ನಲ್ಲಿ ಖಾಲಿ ಮಾಡಲು ಸಣ್ಣ ನಲ್ಲಿಗಳು ಅವು ಭಾರಿ ಚುರುಕು ಕ್ಷಣದಲ್ಲಿ ತೊಟ್ಟಿ ಖಾಲಿ. ಎಲ್ಲೆಡೆ ಹಾಗೇ ಅಲ್ಲ. ಒಂದೆಡೆ ಉಪಯೋಗಿಸದೆ ತೊಟ್ಟಿ ತುಂಬಿ ಹರಿಯ...

ಮತ ಕೊಡುವಾಗ ನನ್ನ ಮತ ಬೇಡವೆಂದಿತ್ತ ಮುಂಗಾರು ಒಳನುಗ್ಗಿ ಸಿಡಿದೆದ್ದು ಮುರಿದಿದ್ದ ಮನಮಂದಿರದ ಬಾಗಿಲನು ಜಗ್ಗಿ ಕಿಟಕಿಯ ಬಿಸಿಲುಗನ್ನಡಿಯೊಳಗಿನ ತಂಪನು ಘಾಸಿಗೊಳಿಸಿ ಅಂತರಂಗದಲಿ ದಶಮಾನಗಳಿಂದಲು ಒಳಿತು ಕೆಡುಕುಗಳ ಅರಿವು ಬಂದಂದಿನಿಂದಲು ಸೃಷ್ಟಿಯಾ...

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ ಯಾರೆಂದು ಕೇಳಿದರೆ ಎಲ್ಲರೂ ಹೇಳುವರು- ಅವನೇ ಯಾಕುಬ ರುಗ್ಣ ಯಾಕುಬ ಅವನ ಕತೆ ಕೇಳುವುದು ನಾಕು ಜನ ಇರುವ ಕಡೆ-ಪ್ರಜಾ ಜನರೆ ಅವನ ವಿರುದ್ಧ ದಂಗೆಯೆದ್ದರು ಸಹಾ-ಆ ದಂಗೆಯನು ಸದೆಬಡಿದು ಅನೇಕರನು ಹಿಡಿದು ಕೆಲವರನು...

ಕಾಯುವುದೊಂದು ಕಾಯಕ ಹಾಲು ಕಾಯುವುದು ಊಟಕ್ಕೆ ಕಾಯುವುದು ಬಸ್ಸಿಗಾಗಿ ಕಾಯುವುದು ಹಣ ದೊರೆಯುವುದೆಂದು ಚಳಿ ಬೇಗ ಮುಗಿಯಲೆಂದು ಮಳೆ ಚೆನ್ನಾಗಿ ಸುಲಿಯಲೆಂದು ಕೊನೆಗೆ ಅವರಿವರನ್ನು ಕಂಡು ಮನಸ್ಸಿನಲ್ಲೇ ಕಾದು ಹೋಗುವುದು. ಇದೆಲ್ಲದಕ್ಕಿಂತ ಚೆನ್ನ ನಿನ್...

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ? ತಡೆಗಟ್ಟಿ ತನ್ನ...

ಶಿಸ್ತಿರಬೇಕು ನಡೆಯಲ್ಲಿ ನುಡಿಯಲ್ಲಿ ಆಟ-ಪಾಠಗಳಲ್ಲಿ ಕಾಯದಲ್ಲಿ, ಕಾಯಕದಲ್ಲಿ. ಮಾನ ಹೋದೀತು-ಶಿಸ್ತಿಲ್ಲದಿರೆ ಉಡುಗೆ-ತೊಡುಗೆಗಳಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸು ವಿಷಯಗಳಲ್ಲಿ ತಲೆ ಹೋದೀತು-ಶಿಸ್ತಿಲ್ಲದಿರೆ ಕಾಯ್ದೆ-ಕಾನೂನಿನಲ್ಲಿ ರೀತಿ-ನೀ...

ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ ತಾರೆಗಳನು ಮುಟ್ಟುವ ರವಿ-ಚಂದ್ರರನ್ನು ತಟ್ಟುವ ಜತು...

ಮೊದಲ ಮಾತು ಮಗಧ ದೇಶದ ಯಾವ ವಿದ್ವಾಂಸ ದೀಕ್ಷೆಯನು ಪಡೆದನೊ ರೇವತ ಮಹಾತೇರನಿಂದ ಅವನ ಹೆಸರೆ ಬುದ್ಧಘೋಷ ಅವನು ಆಮೇಲೆ ಅನುರಾಧಾಪುರಕ್ಕೆ ಹೋಗಿ ಅಲ್ಲಿದ್ದು ಪಿಟಕತ್ರಯಕ್ಕೆ ಟೀಕೆಯನ್ನೂ ಬರೆದು ಹಾಗೂ ಯಾವ ಪ್ರಖ್ಯಾತ ಮಹಿಂದರು ಮೊದಲು ಕಥೆಗಳ ಹೇಳಿದ್ದರ...

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ ತಂದ ಸಂಪತ್ತೆಲ್ಲಿ? ಎ೦...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....