ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ
ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ?
ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ,
ಅದನು ಸಹ ನೀಡುವಳು ಕೇವಲ ಉದಾರಿಗೆ.
ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ
ಭಾರಿ ಕೊಡುಗೆಯ ಹೀಗೆ ಹಾಳುಮಾಡುವೆ ಏಕೆ?
ಭೂರಿ ಸಂಪತ್ತು ಪಡೆದೂ ವ್ಯರ್ಥ ಶ್ರೀಮಂತ,
ಭಾರಿ ಹಣ ಬಳಸಿಯೂ ಬಾಳಲಾರೆ ಅದೇಕೆ?
ನಿನ್ನೊಡನೆ ನೀನೆ ವ್ಯವಹಾರ ನಡೆಸಲು ಹೀಗೆ
ನಿನಗೆ ನೀನೇ ಮೋಸ ಮಾಡಿಕೊಳ್ಳುವ ಪ್ರಿಯ ಒಲವೆ
ಪ್ರಕೃತಿ ನಿನ್ನನು ರಂಗದಾಚೆ ಕಳಿಸುವ ಗಳಿಗೆ
ಎಲ್ಲರೊಪ್ಪುವ ಯಾವ ಲೆಕ್ಕ ನೀ ಕೊಡುವೆ?
ನೀನು ಬಳಸದ ಚೆಲುವು ನಿನ್ನ ಜೊತೆ ಸಾಯುವುದು,
ಬಳಸಿದೆಯೊ ನಿನ್ನ ಸಂತತಿಯಲ್ಲಿ ಹಾಯುವುದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 4
Lo in the Orient when the gracious light…