Home / Kannada Poetry

Browsing Tag: Kannada Poetry

‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್‌- ಅಲ್‌ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ; ‘...

ಎಂಭತ್ತರ ಹರೆಯದ ದುರಗವ್ವ ಮೊಮ್ಮಗನ ಬಲವಂತಕ್ಕೆ ಮೊದಲ ಬಾರಿಗೆ ಬಾಳಲ್ಲಿ ಸಿನಿಮಾ ನೋಡಲು ಹೊರಟಳು ರುಕ್ಕುಂಪೇಟೆಯ ಕಣಿವೆ ಕುಂಬಾರಪೇಟೆಯ ಅಗಸೆ, ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ ಸುರಪುರ ಪೇಟೆ ತಲುಪಿದಾಗ ಸಮಯ ಸಂಜೆ ಸವಾ ಏಳು. ಮೊಮ್ಮಗ ಸಿದ್ದಣ್...

ಜೀವನದಲ್ಲಿ ಅರ್ಥವನ್ನು ಹುಡುಕಲು ಓಡಾಟ ನಡೆದಿದೆ ಸತತ ಎಷ್ಟು ಓದಿದರೂ ಅರ್ಥ ಕಾಣದು ಅಲ್ಲಲ್ಲಿ ನಿಂತು ದಣಿವ ಪರಿಹರಿಸಿ ಮುಂದುವರಿದಾಗ ತುಸುವೆ ಲಭಿಸಿದ ಸುಖವೂ ಅರ್ಥಹೀನ, ಮುಂದೆ ಧುತ್ತೆಂದು ಎದುರು ನಿಲ್ಲುವ ಪ್ರಶ್ನೆ ಮುಖದ ಮೇಲಿನ ದಣಿದ ಗೆರೆಗಳ ...

ಜನ್ಮ ೧ ಪಾಪಿಯಿದ್ದನು ಪಾಪ ಕಡಲ ತೀರದಲಿ ಎಲ್ಲಿ ಒಂದು ಸಾವಿರ ಮಂದಿ ಬೆಸ್ತ ಜನ ಕುರಿಕೋಳಿ ಹಂದಿಗಳ ಜೊತೆಗೂಡಿ ವಸತಿ ಹೂಡಿದ್ದರೋ ಅಲ್ಲದೇ ತೆಂಗುಗಳು, ಅಲ್ಲದೇ ಬಾಳೆಗಳು ಸಿಹಿನೀರಬಾವಿಗಳೂ ಮರಳ ದಂಡೆಯ ಮೇಲೆ ಹರಡಿರುವ ಬಲೆಗಳೂ ಕಡಲ ಕರ್ಕಶ ಕಾಗೆ ಅಷ್...

ಕಾಲ ನಿಲ್ಲುವುದಿಲ್ಲ ಎಂದು ಕಣವಿ ಹೇಳಿದರು ಸುಮ್ಮನೆ ಕಾಲ ನಿಲ್ಲುತ್ತದೆ ಮೋಡದೊಳಗೆ ವಿಮಾನ ಹೊಕ್ಕಾಗ ಗಕ್ಕನೇ ಮೊನ್ನೆ ಕುಳಿತೆ ಜೀವಮಾನದ ಮೊದಲ ವಿಮಾನಾಂತರಂಗ ಪ್ರವೇಶ ಮನೆ ಮರಗಳು ಆಗುತ್ತಾ ಚಿಕ್ಕ ಬೆಂಕಿ ಪೊಟ್ಟಣ ಯಂತ್ರ ಹೊಕ್ಕಿತು ಮೋಡಗಳ ದಿಬ್ಬಣ...

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ ನಡುವಯಸ್ಸಿನ ಕ್ಷಾತ್ರದಲ್ಲ...

ಹೆಣ್ಣು – ವಾಹನ ವಾಹನ – ಹೆಣ್ಣು ಉಪಯೋಗಿಸುವವ ಗಂಡಸು. ತೆಗೆದುಕೊಳ್ಳುವ ತನಕ ಆಸೆ… ನೂರೆಂಟು. ಕಂಡದ್ದೆಲ್ಲಾ ಸುಂದರ ಎನ್ನುವ ಭ್ರಮೆ ಜೋರು. ತನ್ನದಾಗಿಸಿಕೊಳ್ಳುವ ಮೊದಲು ನಾಲ್ಕಾರು ನೋಡಿ ಆರಿಸಬೇಕು ಸರಿಯಾದ ಜೋಡಿ ಮತ್ತೆ ಸು...

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ ತಲೆಯಲಿದ್ದುದು ಪೆನ್ನಿಗೆ ಇಳಿದು ಕಾಗದದ ಮೇಲೆ ಮೂಡುವದಿಲ್ಲ. ವಿಕ್ಷೇಪ… ಅನುಕರಣೆಯ ಅಂಟುರೋಗ ಅಸ್ತವ್ಯಸ್ತ ಮನದ ಒಡಕು ವಿಚಾರ ಭಾವಗಳ ತೊಡಕು ವ್ಯಥಾ ಕಾಲಕ್ಷೇಪ…! ಚಪಲ… ಇಲ್ಲದುದ ಬೇಕ...

ವರುಣನ ಮಗ ಭೃಗು ತಿಳಿದಿದ್ದ ಎಲ್ಲರಿಗಿಂತಲು ತಾನೇ ಬುದ್ಧ ಒದ್ದನು ವರುಣನು ಆತನ ಪೃಷ್ಠಕೆ ಭೃಗು ಮುಗ್ಗರಿಸಿದನಾಚೆಯ ಲೋಕಕೆ ಭೃಗು ನೋಡಿದ- ಅಲ್ಲೊಬ್ಬಾತ ಇನ್ನೊಬ್ಬಾತನ ಬಿಚ್ಚುತಲಿದ್ದ ವೃಕ್ಷದ ತೊಗಟೆಯ ಬಿಡಿಸುವ ಹಾಗೆ ಒಂದೊಂದೇ ಪೊರೆ ಬೀಳಲು ಕೆಳಗೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....