ಹೆಣ್ಣು – ವಾಹನ
ವಾಹನ – ಹೆಣ್ಣು
ಉಪಯೋಗಿಸುವವ
ಗಂಡಸು.
ತೆಗೆದುಕೊಳ್ಳುವ ತನಕ
ಆಸೆ… ನೂರೆಂಟು.
ಕಂಡದ್ದೆಲ್ಲಾ ಸುಂದರ
ಎನ್ನುವ ಭ್ರಮೆ ಜೋರು.
ತನ್ನದಾಗಿಸಿಕೊಳ್ಳುವ ಮೊದಲು
ನಾಲ್ಕಾರು ನೋಡಿ
ಆರಿಸಬೇಕು
ಸರಿಯಾದ ಜೋಡಿ
ಮತ್ತೆ ಸುಲಭದಲ್ಲಿ
ಬದಲಾಯಿಸಲಾಗದು ನೋಡಿ.
ಕಟ್ಟಿಕೊಂಡ ಮೇಲೆ
ಭರಿಸಬೇಕಲ್ಲ ಖರ್ಚು
ಅನುಭವಿಸಬೇಕಲ್ಲ
ಸುಖ – ಯಾತನೆ!
ತೊಂದರೆ… ಬವಣೆ,
ಆದರೂ, ಬೇಕೇ ಬೇಕು
ಪ್ರತಿ ಸಲವೂ… ಹೊಸ
ಹೊಸ ಅನುಭವ
ಕೊಡುವ ಅದೇ
ಹೆಣ್ಣು…
ಮತ್ತು ವಾಹನ.
*****
೨೦-೭-೧೯೯೨



















