ಮರೆತು ಬಿಡು ಇರುವ ನೆನಪುಗಳನೆಲ್ಲಾ ಗಂಟುಕಟ್ಟಿ ಎಸೆದು ಬಿಡು ತೇಲಿ ಹೋಗಲಿ ಸಪ್ತ ಸಮುದ್ರಗಳ ತೀರ ದಾಟಿ ತೂರಿ ಬಿಡು ಬರೆದ ಓಲೆಯನೆಲ್ಲಾ ಹರಿದು ಚೂರು ಚೂರು ಹಾರಿಹೋಗಲಿ ಊರು ಕೇರಿಗಳ ಎಲ್ಲೆ ಮೀರಿ...
ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ...
ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್‌ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ - ನಮ್ಮ ಮಕ್ಕಳು ಮೊಮ್ಮಕ್ಕಳಿಗೆ. *****
ಶ್ರೀಮಾನ್ ದ ರಾ ಬೇಂದ್ರೆಯವರಿಗೆ ದೋಷರಾಹಿತ್ಯದಾ ಕಲ್ಪನಾ ರಾಜ್ಯದೊಳು ಸಗ್ಗದೂಟವನುಣುವ ಹಿರಿಯ ಕಬ್ಬಿಗನೇ ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂ ಇಣಿಕಿಣಿಕಿ ನೋಡುತಿದೆ ಈ ಸಣ್ಣ ಮನವು ಕವಿಯ ಬರೆಹವ ಕಂಡ ರಸಬಿಂದುಗಳ ಸವಿಯೆ...