ಅಂದು – ಇಂದು

ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು... ಹುಲ್ಲು, ದವನದಾ ಕೃಷಿಗೇ... ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದೇ...

ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ ತಾಯಿಗಿದೋ ನಮನ. ಮರಗಿಡ ಆಡಿ ತೀಡುವ...

ದಾಹ

ನಿಮ್ಮ ದಾಹಕ್ಕೆ ಎಳೆ ನೀರು ನಾವು ಕೊಚ್ಚಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ಸಿಹಿ ಕಬ್ಬು ನಾವು ಹಿಂಡಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ನಿಂಬೆ ಹಣ್ಣಿನ ಶರಬತ್ತು...

ನಿನ್ನ ಗಾನದ ಸವಿಗೆ

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ...

ಬಾರವ್ವ ಗಂಗೆ

ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ ಅಕ್ಕ ಇಲ್ಲೇಕೆ ಅಡಗಿರುವೆ ಸಲ್ಲದು ನಿನಗದು...

ತಮಾಷೆ ಪದ್ಯಗಳು

ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ... ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು... ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ... ಹೆಂಚು...

ಭೂಮಿ ಆಟದ ಮೈದಾನ

ಸುತ್ತಲೂ ಕತ್ತಲು ನಂಬುವಂತಿಲ್ಲ ಯಾರೊಬ್ಬರನೂ ಕತ್ತಿ ಹಿಡಿದು ಮೇಲೇರಿ ಬಂದಂತೆ ಕಡ್ಡಿ ಗೀರಿದೆ ಮೆಲ್ಲಗೆ ದೀಪ ಹಚ್ಚಿದೆ ಬೆಳೆಯುತ್ತಾ ಹೋಯಿತು ಬೆಳಕು ಮುಟ್ಟಿದರೆ ಎದೆಯಾಳಕ್ಕೆ ಚುಚ್ಚಿಕೊಳ್ಳುವ ಮುಳ್ಳು ಪ್ರತಿ ಕೊಂಬೆಗೂ ತುದಿಯಲೊಂದು ಸಣ್ಣ ಮೊಗ್ಗು...

ಮರವು ತೂಗಾಡಿದವು

ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ,...

ಮೂಲಾತ್ಮ

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು ಆಗುವುದು ಆಗುವುದು ಏನೇನೊ ಮನಕೆ ಭೋಗವನು ಚಣಕಾಲ ತಳ್ಳೆ ಪದತಲಕೆ ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು ಹದವನರಿಯದೆ ಎಲ್ಲೊ ಸುಳಿಯುತಿತ್ತು ಬಯಲಾಯ್ತು ಬಯಲಾಯ್ತು...

ಹನಿಗಳು

ಕಾದು ಕಾದು ಕೇರಿ ದೂರ ಸರಿತು ಊರಿಂದ! * ಊರೆಂಬಾ... ಬ್ರಹ್ಮ ರಕ್ಕಸನಿಗೆ- ಕೇರೆಂಬಾ... ಬೇತಾಳ! * ಈ ಊರುಕೇರಿ ಎರಡು ಕಣ್ಣುಗಳು! ಒಂದು-ಮೆಳ್ಳಗಣ್ಣು, ಮತ್ತೊಂದು- ಕುರುಡುಗಣ್ಣು! * ಈ ಊರು ಈ ಕೇರಿ...
cheap jordans|wholesale air max|wholesale jordans|wholesale jewelry|wholesale jerseys