ಚೈತ್ರ
ರಣಗುಡುವ ಬಿಸಿಲಿಗೆ ಚೈತ್ರನ ಸವಾಲು ಎಲ್ಲೆಂದರಲ್ಲಿ ಚಪ್ಪರ ಹೊದೆಸುವ ಭರಾಟೆಯ ಕೆಲಸ ನೂಕು ನುಗ್ಗುಲಾಟ ಗಿಡಮರಬಳ್ಳಿಗಳಿಗೆ. *****
ರಣಗುಡುವ ಬಿಸಿಲಿಗೆ ಚೈತ್ರನ ಸವಾಲು ಎಲ್ಲೆಂದರಲ್ಲಿ ಚಪ್ಪರ ಹೊದೆಸುವ ಭರಾಟೆಯ ಕೆಲಸ ನೂಕು ನುಗ್ಗುಲಾಟ ಗಿಡಮರಬಳ್ಳಿಗಳಿಗೆ. *****
ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! […]
ಮರುಜನ್ಮಪಡೆದ ಹೂವುಗಳು ಮಣ್ಣಾಗಿದೆಯೋ ಮಣ್ಣೇ ಮರುಜನ್ಮ ಪಡೆದು ಹೂವುಗಳಾಗಿವೆಯೋ ಲಾಲ್ಬಾಗ ಮಣ್ಣೆಲ್ಲ ಬಣ್ಣಬಣ್ಣಗಳ ಹೂವಂತೆ ಕೆಂಪು ಕಂಪು ತಂಪು. *****
ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬದಬನೆ ನಿಸರ್ಗ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೊಡುತ್ತಿದೆ. *****
ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. […]
೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ […]