ಮುಗ್ಧರ ಬಲಿ

ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****

ಬೆಳ್ಳಿ ಹೂವು

ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. *****

ಮಳೆ – ಹುಳ

೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ...
cheap jordans|wholesale air max|wholesale jordans|wholesale jewelry|wholesale jerseys