ಬೆಳ್ಳಿ ಹೂವು – ಚಿಲುಮೆ

ಬೆಳ್ಳಿ ಹೂವು

ಸೃಷ್ಟಿ

ಸೃಷ್ಟಿಯೊಳಗೊಂದು ಸೃಷ್ಟಿ ಸೃಷ್ಟಿಸಲು ಹೊರಟಿದ್ದಾರೆ ಸೃಷ್ಟಿಗಳು ರಾತ್ರಿ ಕಲ ಕಲ ಕುಲು ಕುಲು ಬೆಳಿಗ್ಗೆ ವಾಂತಿ. *****

ನೆಮ್ಮದಿಗೂ ಬಿಡದ….

ಬೇಸಿಗೆ ಬಿಸಿಲು, ನೆರಳಿನ ಆಸೆ ಉಸ್ಸೆಂದು ಕುಳಿತರೆ ದುತ್ತೆಂದು ಬರುತ್ತಾರೆ ಭಿಕ್ಷುಕರು ಕೊರಕಲು ಧ್ವನಿ ಕೂಗಿಗೆ ಎಂಟಾಣೆ ಕೊಟ್ಟರೆ – ರೂಪಾಯಿ ಕೊಡುವ ತಾಕತ್ತಿಲ್ಲದವರು ಕಬ್ಬನ್ ಪಾಕಿðಗೇಕೆ […]

ಅವಳಿ – ಜವಳಿ

ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****

ವಿಪರ್ಯಾಸ

ರಸ್ತೆಗಳು ಹೆದರಿ ಕತ್ತಲೆಯಲಿ ಮುದುರಿಕೊಳ್ಳುತ್ತಿದ್ದಂತೆಯೇ ಸರಿ ರಾತ್ರಿ ಬಿಚ್ಚಿಕೊಳ್ಳುತ್ತಾರೆ ಕಳ್ಳರು ಕದೀಮರು ತಮ್ಮ ವಿಕೃತ ಬಗೆ ಬಗೆಯ ಕಾಮನೆಗಳನ್ನು. *****

ರಸ್ತೆ

ಕಗ್ಗತ್ತಲು ರಾತ್ರಿಗಳಲಿ ನಗರದ ಬೀದಿಗಳು ಮುಸಿ ಮುಸಿ ಅಳುತ್ತವೆ ದಣಿದ ದೇಹಕೆ ತಂಪಡರಲು ಚಂದ್ರನೂ ಇಲ್ಲೆಂದು. *****

ಬಿ. ಪಿ.

ಬರಬರನೆ ಪ್ರೆಶರ್‍ ಏರುವ ಟ್ಯೂಬ್ ಒಡೆಯಬೇಕೆಂದಾಗ – ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್‍. *****