ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೧

ಅವನ ಕತೆ ಹುಚ್ಚು ವಾಸ್ತವತೆ. ಅವಳ ವ್ಯಥೆ ಬರೀ ಭಾವುಕತೆ. ಅವರಿಬ್ಬರೂ ಒಬ್ಬರೊಳಗೊಬ್ಬರು ಇಳಿಯುವುದು ಬದುಕಿನ ರೋಚಕತೆ, ಪ್ರೀತಿಯ ಪ್ರಾತ್ಯಕ್ಷಿಕೆ. *****

ಸುಳ್ಳು

ಪಾಪು: "ಅಪ್ಪ, ಅಮ್ಮ ತುಂಬಾ ಸುಳ್ಳು ಹೇಳ್ತಾಳೆ?" ಅಪ್ಪು: "ಹೌದು ಏನಾಯ್ತು..." ಪಾಪು: "ಕನ್ನಡಿ ಮುಟ್ಟು ಬೇಡ ಬಿದ್ದರೆ ಎರಡು ಚೂರಾಗುತ್ತೆ ಅಂದ್ಲು ಇಲ್ಲಿ ನೋಡು ಎಷ್ಟು ಚೂರು ಚೂರಾಗಿದೆ ಅಂತ.." *****
ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯ

ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯ

* ಒಡಲಾಳದ ಚಿತ್ರ ಹೆಳವನಕಟ್ಟೆ ಗಿರಿಯಮ್ಮನ ‘ಚಂದ್ರಹಾಸ ಕಥೆ’, ‘ಸೀತಾ ಕಲ್ಯಾಣ’, ‘ಉದ್ಧಾಲಕನ ಕತೆ’ ಮುಂತಾದ ಕತನಕಾವ್ಯಗಳಲ್ಲೇ ಕಥನ ಪರಂಪರೆಯ ಕುರುಹುಗಳಿವೆ. ಇಂತಹ ಪರಂಪರೆಯನ್ನು ಪೋಷಿಸಿಕೊಂಡು ಬಂದ ದಾವಣಗೆರೆ ಜಿಲ್ಲೆಯಲ್ಲಿ ಶಕ್ತವಾಗಿ ಕಥೆ ಹೇಳಬಲ್ಲ...
ಪತ್ರ – ೧೦

ಪತ್ರ – ೧೦

ಪ್ರೀತಿಯಾ ಗೆಳೆಯಾ, ಈ ದಿನ ಶಿಕ್ಷಕರ ದಿನಾಚರಣೆ. ಎಷ್ಟೊಂದು ಮೃದು ಹಸ್ತಗಳು ತಬ್ಬಿದವು. ಚಾಕಲೇಟು ಹೂವು ಪೆನ್ನುಗಳು. ಕೆಂಪಗೆ ಬೆಳ್ಳಗೆ ಅಂಗೈ ಪದಕು, ಕೆಂಪು ಬಳೆಗಳು ನೀಲಿ ರಿಬ್ಬನ್‌ಗಳು. ಮತ್ತೊಂದು ಹಸ್ತದಲಿ ಜಿಬ್ಬಾದ ಚಾಕಲೇಟು....

ಗುಣ

ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****