
ಅತ್ತಿತ್ತ ನೋಡದೆ ಇತ್ತಿತ್ತ ಕಾಣದೆ ಎತ್ತ ಹೊರಟೆ ಈ ಕತ್ತಲ ಹಿಂದಾಕಿ ಏ ಹುಡುಗಿ ತುಸು ಮೆಲ್ಲಗೆ ಹೋಗೆ ಮಲ್ಲಿಗೆ ಹಾಗೆ ಕೂದಲ ಜಡೆ ಮಾಡಿದಿ ಅದಕ ಪರಿಮಳ ಹಚ್ಚಿದಿ ಕಳ್ಳ ಹೆಜ್ಜೆಯಲಿ ಬೇಗಬೇಗನೆ ಹೊರಟಾಕಿ ಏ ಹುಡುಗಿ ತುಸು ಮೆಲ್ಲಗೆ ಹೋಗೆ ಮಲ್ಲಿಗೆ ಹಾ...
ಬೋಧಿವೃಕ್ಷದ ಕೆಳಗೆ ಕುಳಿತ ಬೋಧಿಸತ್ವ ಕೇಳುತಾನೆ ತತ್ವಪದಗಳ ಹಾಡುತಾಳೆ ಹರಿಣಿ ಅತಿಶ್ರುತಿ ಮಾಡದಿರು ವಾದ್ಯದ ತಂತಿಗಳ ಅತಿಶ್ರುತಿ ಮಾಡಿದರವು ತುಂಡರಿಸಿ ಬೀಳುವುವು ಆಮೇಲವು ನುಡಿಯವೇನೂ ಓ ಬೋಧಿಸತ್ವ ಸಡಿಲಾಗಿಸದಿರು ವಾದ್ಯದ ತಂತಿಗಳ ಸಡಿಲಾಗಿಸಿದರ...
ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು ದಾರಿ ಸಾಗುವುದೆ ಒಳ್ಳೆಯದು ಎಲ್ಲಿಯೂ ನಿಲ್ಲದೆ ಏನನೂ ಕಾಣದೆ ಧಾವಿಸುವುದೇ ತಲ್ಲಣ ಕೆರೆಯ ನೋಡುವುದು ಕೊಳವ ನೋಡುವುದು ಜಲಾಶಯದ ಬಳಿ ತಂಗುವುದು ಗಿರಿಯನೇರುವುದು ಕಣಿವೆಯನಿಳಿಯುವುದು ಬಳಸು ದಾರಿಗಳಲ್ಲಿ ಸರಿಯುವು...
ಸದಾ ನನ್ನ ಮನದೊಳಗೆ ಮಿಡಿಯುತಿರು ಸಾಕ್ಷಿಯೇ ಸದಾ ನನ್ನ ಕಿವಿಯೊಳಗೆ ನುಡಿಯೇ ಮನಃಸಾಕ್ಷಿಯೇ ನನ್ನ ನಾಲಿಗೆಯಲಿ ಇರು ನೀನು ನನ್ನ ನಗೆಯಲ್ಲಿ ಇರು ನೀನು ಸದಾ ನನ್ನ ಬಗೆಯಲ್ಲಿರು ಸದಾ ನನ್ನ ಬೆಳಕಾಗಿರು ಕಣ್ಗುರುಡ ನಾ ಕಾಣದೆಯೇ ತಪ್ಪು ಹೆಜ್ಜೆಯಿಡುವಾಗ...
ಮುಗಿಯಿತೆ ನಾಟಕವು ಪರದೆ ಕೆಳಕ್ಕಿಳಿಯಿತೆ ಪ್ರೇಕ್ಷಕರೆದ್ದು ಹೋಗಿಯಾಯಿತೆ ನೇಪಥ್ಯ ಬರಿದಾಯಿತೆ ವೇಷ ಕಳಚಬೇಕು ನಟರು ಮುಖವ ತೊಳೆಯಬೇಕು ಅವರು ತೊಳೆದರೂನು ಬಣ್ಣವು ಮೋರೆಯಲ್ಲಿ ಇನ್ನುವು ಇನ್ನೂ ಏನೊ ಉಳಿದಂತೆ ಕತೆಯಿನ್ನೂ ಮುಗಿಯದಂತೆ ಮಾತು ಅರ್‍ಧವು...
ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ ಮರವೆ ...
ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು ಮಾಡು ಹಾರಿತು ಗೋಡೆ ಬಿದ್ದಿತು ಮನೆಕಟ್ಟು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು ಬಟ್ಟೆ ಹರಿಯಿತು ಬೆರಳು ಮುರಿಯಿತು ಚೂರು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದ...
ಮಾನ್ಯರಿಗೆ ಶರಣು ಜನ ಸಾಮಾನ್ಯರಿಗೆ ಶರಣು ಅನ್ಯರಿಗೆ ಶರಣು ಅನನ್ಯರಿಗೆ ಶರಣು ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು ಹೊನ್ನೆ ಮರದಡಿ ಕೂತವರಿಗೆ ಚೆನ್ನೆಯಾಡುವ ಕನ್ನೆಯರಿಗೆ ಕನ್ನಡದ ಜಾಣೆಯರಿಗೆ ಕನ್ನಡದ ಜಾಣರಿಗೆ ಬಹಳ ಶರಣು ಮೊನ್ನೆ ಹೋದವರಿಗೆ ನ...
ಕನ್ನಡದ ಶ್ರೀಕಂಠ ಕಾಳಿಂಗರಾಯ ಕನ್ನಡ ತಾಯ ದಯವಾಗಿ ನೀವು ಕನ್ನಡದ ನೆಲದ ವರವಾಗಿ ನೀವು ಆ ಅಂಥ ಉದಯದಲಿ ನೀವಿದ್ದಿರಿ ಎಬ್ಬಿಸಿದಿರಿ ಉದ್ದೀಪಿಸಿದಿರಿ ಸತ್ತಂತೆ ಮಲಗಿದವರ ಎಚ್ಚರಿಸಿದಿರಿ ಸುಮಧುರ ಗಾಯನದಿಂದ ಹಾಡ ತುಂಬಿದಿರಿ ನಾಡ ತುಂಬಿದಿರಿ ಪ್ರತಿಯ...
ಕಾಳು ನೀಡು ಹಕ್ಕಿಗಳಿಗೆ ಕಾಳಿಗವೇ ಕಾರಣ ನೀರು ನೀಡು ಮರಗಳಿಗೆ ನೀರಿಗವೇ ಕಾರಣ ನಿನ್ನೆಯ ನೆನೆ-ಈ ದಿನಕೆ ನಿನ್ನೆಯೇ ಕಾರಣ ಈ ದಿನ ಜೋಪಾನ- ನಾಳೆಗೀ ದಿನವೇ ಕಾರಣ ಯಾರು ನೇಯ್ದ ಮಹಾಜಾಲ ವಿಶ್ವವೆಂಬೀ ಅಚ್ಚರಿ ಅಲ್ಲಿ ಬಿಸಿಲು ಇಲ್ಲಿ ಮಳೆ ಇಂದ್ರಚಾಪದೀ...













