ಮನೆಯಲಿ ಪಕ್ಷಗಳೆರಡು ಗಂಡನದು ಕೃಷ್ಣಪಕ್ಷ ಹೆಂಡತಿಯದು ರಾಧೆ ಪಕ್ಷ ಮಕ್ಕಳದು ಅಪ್ಪ ಅಮ್ಮನ ಸುರಕ್ಷಾ ಪಕ್ಷ! *****...
ಮೊನ್ನೆ Referenceಗೆಂದು Library ಹೊಕ್ಕಾಗ ಫುಸ್ತಕಗಳು ಮೋಕ್ಷಗೊಂಡವರಂತೆ ಅವುಗಳ ಮುಳುಮುಳು ಧ್ವನಿಕೇಳಿ ಚಕಿತಳಾದೆ. “ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ ಅವಕ್ಕೊಂದು ಆತ್ಮ ಇದ್ದರೆ ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸ...
ಯಾರು ಏನಂದರೇನು ಯಾರಿಗೆ ಹೇಗಿದ್ದರೇನು ಅವರವರ ಮಗು ಅವರಿಗೇ ಚೆನ್ನ ಪುಟಿಕಿಟ್ಟ ಚೊಕ್ಕ ಚಿನ್ನ ಮೂಗು ಮೊಂಡಾಗಿದೆಯೆಂದಿರಾ? ಬೇಟೆಗಾರನ ಕೈಯ ಬಾಣ ಜೋಕೆ ಕಣ್ಣು ಗುಲಗುಂಜಿಯೇ? ದೇವರ ಮುಂದೆ ಹಚ್ಚಿಟ್ಟ ದೀಪ ದೂರವಿರಿ ನಕ್ಕರೆ ಭಯವೇತಕೆ? ಮೊಗ್ಗು ಬಿರಿ...
ನಾನು ನಾನು ಎಂಬ ಮಾಯೆ ಏಳುವುದೆಲ್ಲಿಂದ? ಎಲ್ಲವನೂ ಅಲ್ಲಾಡಿಸಿ ಹಾಯುವುದೆಲ್ಲಿಂದ? ಬುದ್ಧಿಯೇ ವಿದ್ಯೆಯೇ ಜೀವ ಹೊದ್ದ ನಿದ್ದೆಯೇ, ನೆಲ ಜಲ ಉರಿ ಗಾಳಿಯಿಂದ ಎದ್ದು ಬಂದ ಸುದ್ದಿಯೇ? ನಾನು ಎಂಬ ಹಮ್ಮಿಗೆ ತನ್ನದೆ ನೆಲೆ ಎಲ್ಲಿ? ಯಾವುದೊ ಬೆಳಕನು ಕನ್ನ...
ಆಗಸದಲ್ಲಿ ನನ್ನ ಹೆಜ್ಜೆ – ಗುರುತುಗಳು ಕಾಣಿಸಲಿಲ್ಲವೋ? ಮರೆತೆಯೇಕೆ- ಇಡೀ ಆಗಸವೇ ನನ್ನ ಹೆಜ್ಜೆ – ಗುರುತಲ್ಲವೇ? *****...
ಖಾದಿ ಪಂಚೆ, ಖಾದಿ ಜುಬ್ಬಾ ತಪ್ಪದೆ ತೊಟ್ಟುಕೊಂಡಿರುವವನೇ ದರ್ಜಿ ದಾಸಣ್ಣ, ದಾಸಣ್ಣನ ಮೈಕೈ ಮೇಲೆಲ್ಲ ಬಿಳಿಯ ಕಲೆಗಳಿವೆ. ನೋಡಿದವರು ತೊನ್ನೆಂದು ಭ್ರಮಿಸಬಹುದು. ಆದರೆ ಇವು ಬೆಂಕಿಯ ಆಕಸ್ಮಿಕದಿಂದ ಉಂಟಾದ ಕಲೆಗಳು. ತನಗೆ ಬೇಕೆನಿಸುವಾಗ ಯಾರನ್ನಾದರೂ...
೧ ಈಗೀಗ ನಿಸರ್ಗಕ್ಕಿಂತಲೂ ಹೆಚ್ಚಾಗಿ ಪತ್ರಿಕೆಗಳು, ಕ್ಯಾಲೆಂಡರ್‌ಗಳು ರೇಡಿಯೋ, ಟಿ.ವಿ. ಅಡ್ವರ್ಟೈಸ್ಮೆಂಟ್ ಗಳು ಎಬ್ಬಿಸುತ್ತವೆ ನೆನಪಿಸುತ್ತವೆ ಯುಗಾದಿ ಯುಗಾದಿ ಎಂದು ವೇಷ ಭೂಷಣ ತೊಟ್ಟು ಸಡಗರಿಸಿರೆಂದು. ೨ ಒಮ್ಮೊಮ್ಮೆ ನೀನು ಸಿಹಿ – ನಾ...
ಗುಬ್ಬಾರೆ ಗುಬ್ಬಾರೆ ಗುಬ್ಬಾರೆ ದುಂಡು ದುಂಡು ಮಕ್ಕಳ ಗುಬ್ಬಾರೆ ಗುಬ್ದಿಮರಿಯಂತಹ ಗುಬ್ಬಾರೆ ನೋಡಲು ಕಣ್ಣಿಗೆ ಹಬ್ಬಾರೆ ಊದಿದರುಬ್ಬುವ ಗುಬ್ಬಾರೆ ಬಿಟ್ಟರೆ ಹಾರುವ ಗುಬ್ಬಾರೆ ಅದೋ ನೋಡಿರಿ ಆಗಲೆ ಹಾರಿತು ಹಾರಿತು ತೇಲಿತು ಗಾಳಿಯಲಿ ಹಿಂಬಾಲಿಸಿತು ...
ಕಾಮ ನೀನು ಧೂಮವಾದಿ ಸೋಮನಾಥನ ಕಣ್ಣಿಗೆ ಪ್ರೇಮದಾ ನುಡಿ ಏನು ಹೇಳಿದಿ ಕಾಮಿನಿ ರತಿ ದೇವಿಗೆ ನಿನ್ನ ಪೋಲುವೆ ಪುರುಷರು ಜಗದೊಳಿನ್ನೂ ಹುಟ್ಯಾರೆಂದಿಗೆ? ನನ್ನ ಮುತ್ತೈದೆ ತನಕೆ ಭಂಗ ತಂದ್ಯಾ ಇಂದಿಗೆ ||೧|| ಮಾರ ನಿನ್ನ ರೂಪ ನೋಡಿ ಸೈರಿಸದೀ ಅಮರ್‍ಯಾರ...
ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ… ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






