
ಅಂತರಂಗದಾಳದಲಿ ಮರೆಯಾಗಿ ನಿಂತಿದೆ ಒಂದು ಬಂಗಾರದ ಎಳೆ ಅದು ಆತ್ಮವಿಶ್ವಾಸದ ನೆಲೆ. ಅನುಭವದುರಿಯಲಿ ಬೆಂದು ಉಕ್ಕಿಹರಿದ ಲಾವಾರಸ ಗಟ್ಟಿಯಾದಾಗ ಪುಟಕ್ಕಿಟ್ಟ ಬಂಗಾರ, ಅದೇ ಜೀವನ ಸಾರ. ಅಂತರಂಗದಾಳದ ಬಂಗಾರದ ಎಳೆಯೊಳಗೆ ಬೆಚ್ಚನೆ ಮಲಗಿದೆ ಆತ್ಮವಿಶ್ವಾಸ...
ಸದಾ ಉತ್ಸವ ಜಗದೊಳಗೆ- ಉಳುವ, ಬಿತ್ತುವ, ಟಿಸಿಲೊಡೆಯುವ ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ! ಹಸಿರು ತೋರಣ, ಋತುಗಳ ಮೆರವಣಿಗೆ, ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ, ಸೂರ್‍ಯನ ಬಿಸಿ, ಚಂದಿರನ ತಂಪು ಹೇಗೆ ಸೃಷ್ಟಿಸಿದೆ ಇದನ್ನೆ...













