“ಚುಟುಕ” ಎಂದರೇನೆಂದು
ಚುಟುಕಾಗಿ ಹೇಳಬೇಕೆಂದರೆ
ಅದು ದಿಢೀರ್ ನೆ ಕಾವ್ಯದ ಕಿಕ್ ಕೊಡಬಲ್ಲ
ಒಂದು ಬಗೆಯ ‘ಗುಟುಕ’
ಇನ್ನೂ ಬೇಕಿದ್ದರೆ ಹೇಳುತ್ತೇನೆ ಕೇಳಿ,
ಇವು ಕಾವ್ಯವೆಂಬ ಗಾಜಿನಮನೆಗೆ ಇದ್ದಕ್ಕಿದ್ದಂತೆ
ನುಗ್ಗಿ ಲಗ್ಗೆ ಹಾಕುವ ಗಿಡ್ಡ ತಳಿಯ ಗೂಳಿ.
*****