ಗ್ರೀಸ್ ಸಖಿ
ಹಿಮಗಲ್ಲಲಿ ಕೊರೆದ ಸುಂದರಿ
ಲಿಪ್ ಸ್ಟಿಕ್ ತುಟಿತೆರೆದು
ಬಳುಕಿ ಬಿನ್ನಾಣವಾಗಿ
ಡ್ರಿಂಕ್ಸ್ ಬೇಕಾ…. ಹೆಸರುಗಳೇನೇನೋ ಹೇಳಿ
ಗ್ಲಾಸ್ ಹಿಡಿದೇ ಇದ್ದಳು.
ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ
ಕೇವಲ ತಂಪುನೀರು ಕೇಳಿದರೆ
ತುಳು ತುಳುಕಿ ಕುಲುಕಿ ನಗಬೇಕೆ ಹುಡುಗಿ
ಸಾಕು ಸಾಕಿಷ್ಟೇ ತುಳುಕಿನ ನಗು
ಇದೆಲ್ಲ ಡ್ರಿಂಕ್ಸ್ ಗೂ ಸಮ…
ಮೆಲ್ಲಗೆ ಜಾಗ ಖಾಲಿ ಮಾಡಿದ್ದಳು.
*****