ಜಂಕ್ಷನ್

ಎಲ್ಲಿಂದೆಲ್ಲಿಂದಲೋ ತೇಕುತ್ತಾ
ಬಂದು ನಿಲ್ಲುವ ಗಾಡಿ
ಮತ್ತೆಲ್ಲಿಗೋ ಅದರ ಪಯಣ

ಯಾರೋ ಇಳಿಯುವವರು
ಮತ್ತಿನ್ಯಾರೋ ಏರುವವರು
ಹಸಿದವರು, ಬಾಯಾರಿದವರು.
ಕೊಳ್ಳುವವರು, ಮಾರುವವರು
ಗಜಿಬಿಜಿ ಗೊಂದಲ
ಸತ್ತವನಿಗೆ ಫಕ್ಕನೆ
ಜೀವ ಬಂದಂತೆ ಎಲ್ಲಾ!

ಗಾಡಿ ಹೊಟ್ಟೆಗೊಂದಿಷ್ಟು ನೀರು ಬಸಿದು
ಗಾಡಿ ಅಂಗಗಳ ಸರಿ-ಬೆಸ ಲೆಕ್ಕಾಚಾರ
ಅವಿರತ ಪಯಣದ ಮಧ್ಯೆ
ಒಂದಿಷ್ಟು ಆರಾಮ

ಕಣ್ಗೆ ಬೇಕೆನಿಸುವ ತಿಂಡಿ
ಸಾಮಾನಿನವನ ತಳ್ಳುಬಂಡಿ
ಏನೋ ಕೂಗುವ
ಮತ್ತೇನೋ ಬಡಬಡಿಸುವ
ಪಿಚಕ್ಕನೆ ಉಗಿಯುವವ
ಯಾವುದೋ ಲೋಕದಲ್ಲಿರುವವನಂತೆ
ಸಿಗರೇಟಿನ ಹೊಗೆ ಬಿಡುತ್ತಾ
ನಿಂತ ಸತ್ತ ಮುಖದವ

ಇಲ್ಲಿ ನಾಳೆಗಳಿಲ್ಲ
ಇಂದು ಈ ಘಳಿಗೆಯಷ್ಟೇ ಜೀವಂತ!
ಚಿತ್ರ, ವಿಚಿತ್ರ ವೇಷದ
ಚಿತ್ರ, ವಿಚಿತ್ರ ಭಾಷೆಯ
ಅನ್ಯಗ್ರಹ ಜೀವಿಗಳೆನಿಸುವ
ವಿಚಿತ್ರ ಮುಖಗಳ ಮುಖಾಮುಖಿ ಅರೆಘಳಿಗೆ

ಗಂಟೆ ಬಾರಿಸಿದೊಡನೆ
ಎಲ್ಲಾ ಮುಗಿದಂತೆ ತರಾತುರಿ
ಅತ್ತಿಂದಿತ್ತ ಇತ್ತಿಂದತ್ತ ಗಡಿಬಿಡಿ ಓಡಾಟ
ಮತ್ತೆ ಗಬಗಬನೆ ಹೊಟ್ಟೆಯೊಳಕ್ಕೆ
ಎಲ್ಲರ ತುಂಬಿ
ತೇಕುತ್ತಾ ತೆವಳುತ್ತಾ ಮೆಲ್ಲಗೆ
ಹೊರಡುತ್ತದೆ ಗಾಡಿ
ಇತ್ತ ಎಲ್ಲಾ ಒಮ್ಮೆಗೇ ಸತ್ತಂತಾಗಿ
ನಿಶ್ಯಬ್ಧ, ಸ್ತಬ್ಧ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡಿಗೆ ಪಾತ್ರೆ
Next post ಸಹಜ

ಸಣ್ಣ ಕತೆ

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…