ಹೂಮೂಸುವಾಗ ಅದರೊಳಗಿರುವ ಕಾಯಿಯ ನೆನಪಿರಲಿ
ಹಣ್ಣು ತಿನ್ನುವಾಗ ಅದರ ಬೀಜದ ನೆನಪಿರಲಿ
ಬಣ್ಣ ಬಣ್ಣದ ಮುಗಿಲ ನೋಡುವಾಗ
ಅದರ ಹಿಂದಿನ ನೀಲಾಗಸದ ನೆನಪಿರಲಿ
ವಿವಿಧ ವಿತಾನಗಳಿಂಚರವ ಕೇಳುವಾಗ
ಅದರಂತರ ಭಾವ ಬಗೆದೋರಲಿ,
ಅಲೆಗಳಾನಂದವನನಭವಿಸುವಾಗ
ಕೆಳಗೆ ತುಡಿಯುವ ಕಡಲ ತಿಳಿವಿರಲಿ,
ಉಬ್ಬು ತಗ್ಗುಗಳನೇರಿಳಿಯುವಾಗ
ಅದರುದ್ದ ಸಾಗುವ ದಾರಿಯ ಗುರಿಯಿರಲಿ,
ಮಾಂಸವ ಸವಿಯುವಾಗ ಅದಕ್ಕೆ
ಬೆಂಗೊಟ್ಟಿರುವ ಎಲುವಿನ ಹಂದರದರಿವಿರಲಿ
*****
(೩೦-೦೧-೧೯೭೩)