ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು?
ಏನೆಲ್ಲ ಆಗಬಹುದು…
ಸಂಸ್ಥೆಗೆ ನಶ್ಟವಾಗಬಹುದು
ಪ್ರಯಾಣಿಕರಿಗೆ ಕಶ್ಟವಾಗಬಹುದು
ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು…
ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,
ಮುಗಿಲು ಮುಟ್ಟಬಹುದು!
*

ಮತ್ತೇನಾಗಬಹುದು?
ಶಾಲೆ, ಕಾಲೇಜಿಗೆ, ಕುರುಡ, ಕುಂಟರಿಗೆ,
ಪತ್ರಿಕಾ ಪ್ರತಿನಿಧಿಗಳಿಗೆ, ಉಸಿರುಗಟ್ಟಿ
ವ್ಯಾಪಾರ, ವೈವಾಟು ತಲೆಕೆಳಗಾಗಿ,
ಸಾಮಾನ್ಯರ ಪಾಡು, ನರಕಯಾಥನೆಯಾಗಿ,
ಹಳ್ಳಿ ಹಳ್ಳಿಗಳೂ ದೂರ ಸರಿದು,
ಶಾಲೆ, ಕಾಲೇಜು, ಸಿನಿಮಾ, ನಾಟಕ, ನಾಡ ಕಛೇರಿಗಳೆಲ್ಲ…
ಒಣ ಒಣ! ಭಣ ಭಣಗುಟ್ಟಿ,
ಅಘೋಶಿತ ಬಂದ್ ನಿರ್ಮಾಣವಾಗಬಹುದು!
ಸೂರ್‍ಯ, ಚಂದ್ರ, ತಾರೆ, ಗ್ರಹಗಳೆಲ್ಲ ತ್ಯಾಪೆ ಮೊರೆಲಿ, ಮರೆಯಾಗಬಹುದು!
ಮುಪ್ಪಿನವರೂ ಒಪ್ಪದಲಿ, ನಡೆದೂ ಮನೆ ಸೇರಬಹುದು
ಅಂದು-ಟೀವಿ, ರೇಡಿಯೋ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೆನಿಸಿ,
ಜನ ಸೋಮಾರಿ ಕಟ್ಟೆ ಏರಿ,
ಜೊಂಪು ನಿದ್ದೆ ಸೇರಿ,
ಮೋಟು ಬೀಡಿಗೆ, ಹುಡುಕಾಡಬಹುದು!
*

ಮುಷ್ಕರದ ಬಿಸಿಗೆ; ಒಬ್ಬರ ಮೇಲೆ ಒಬ್ಬರು, ಬಿದ್ದು ಎದ್ದು,
ಇದ್ದುಬದ್ದುದ್ದನ್ನೆಲ್ಲ ಕಳಕೊಂಡು…
ಮುರುಕಲ ಗಾಡಿ, ಮನೆ ಮಾರು ಸೇರಲಿಬಹುದು.
ಗುಜರಿ ಸೈಕಲ್, ಬೈಕ್, ಕಾರು, ಜೀಪುಗಳೂ…
ಮರುಹುಟ್ಟು ಪಡೆದು, ಅಲ್ಲಲ್ಲಿ ಕೆಟ್ಟು ನಿಲ್ಲಬಹುದು!
ಖಾಸಗೆರಿಗೆ ಚೆಲ್ಲಾಟ,
ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿ,
ಗದ್ದುಗೆ ಹಿಡಿದವರಿಗೆ, ಕಂಟಕವಾಗಬಹುದು!
*

ಒಂದೇ ದಿನದಲಿ; ಖಾಸಗಿಕರಣ ಹಿಗ್ಗಿ ಹಿರೇಕಾಯಿಯಾಗಿ,
ಸಂಸ್ಥೆ ಮೇಲಿನ, ವಿಶ್ವಾಸ ಕುಗ್ಗಿ, ನರಸತ್ತ ನಾಮರ್ಧನನಂತೆ,
ಅದಲು ಬದಲು ಕಂಚೀ ಕದಲು, ಮಿಂಚಿನ ಮುಷ್ಕರದ ಜೊಂಪಿಗೇ
ರಸ್ತೆಗಳು ನಿಟ್ಟೂಸಿರ ಸೂಸಿ,
ನಿದ್ರೆಲ್ಲದೆ, ಮಗ್ಗುಲಿಗೆ ಮುಖವಿಟ್ಟು, ಮಲಗಬಹುದು!
*

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ…
ಏನೆಲ್ಲ ಆಗಬಹುದು?!
ಕಾಯಿಪಲ್ಲೆ, ಮಾರ್ಕೆಟ್ ರೇಟು, ರೇಸಿನಂತೆ
ರೈಜಾಗಿ, ಬಡಬಗ್ಗರ ಕನಸ್ಸುಗಳು ಬಿಕರಿಯಾಗಿ,
ಹುಬ್ಬಳ್ಳಿಯ… ಕಮರಿಪೇಟೆಯಾಗಬಹುದು!
*

ಸಂಸ್ಥೆ ಬಸ್ಸುಗಳು: ಒಂದು ದಿನ ನಿಂತರೆ,
ಇಶ್ಟೆಲ್ಲ ಆಗಬಹುದು!!
ಇದಕ್ಕಿಂತ ಮಿಗಿಲೂ ಆಗಬಹುದು
ಮುಗಿಲು ಕಳಚಿ ಬೀಳಲೂಬಹುದು
ಭೂಮಿ-ಆಕಾಶ ಒಂದಾಗಬಹುದು
ಜಲ ಬತ್ತಿ, ಬಡ ಕಾರ್ಮಿಕರು, ಬೀದಿ ಪಾಲಾಗಬಹುದು!
*****