ಸೂರ್ಯ ನೋಡು ಶಿಸ್ತಿನ ಸಿಪಾಯಿ
ಕತ್ತಲಾಗುತ್ತಲೂ ಮಲಗಿ ಹೊತ್ತಿನಂತೆ
ಎದ್ದು ಹೊರಟು ಬಿಡುತ್ತೆ ಸವಾರಿ
ನೀನಿದೀಯಾ ನೋಡು ಚಂದ್ರ,
ರಾತ್ರಿಯೆಲ್ಲಾ ಪೋಲಿ ಸುತ್ತಿ
ಬೆಳಗಾದ ಮೇಲೆ ಪತ್ತೆ ಇಲ್ಲದಾಂಗೆ
ಎಲ್ಲೋ ಹೋಗಿ ಸಂಜೆವರೆಗೂ
ಬಿದ್ದುಕೊಳ್ತೀಯಾ, ಶುದ್ಧ ಸೋಂಬೇರಿ.
*****