ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ

ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ
ಕರೆದರೆ ಹೋಗದೆ ಬಿಡಲಿಲ್ಲಾ || ಪ ||

ಹುರಿಯಕ್ಕಿ ಹೋಳಿಗಿ ಹೂರಣಗಡಬು
ಕಡಲೀ ಪಚ್ಚಡಿ ಕಟ್ಟಿನಾಂಬರಾ
ಉಂಡಗಡಬು ಪುಂಡಿಯ ಪಲ್ಲೆ
ಬುಟ್ಟಿಯೊಳಿಟ್ಟೆಲ್ಲಾ
ಕೆಮ್ಮಣ್ಣು ಬುಟ್ಟಿಗೆ ಬಡದೆಲ್ಲಾ
ಅದರನುಭವ ತಿಳಿಲಿಲ್ಲಾ ||೧||

ಅಂದು ಇಂದು ಬಂದು ಬಹುದಿನ
ಹೊಲದೊಳು ಕುಂತೆಲ್ಲಾ
ಮನಸಿನ ಮೈಲಿಗೆ ತೊಳಿಲಿಲ್ಲಾ
ಗಂಧದ ಬೊಟ್ಟು ಗಮಕಿಲೆ ಇಟ್ಟು
ಹಂಗನೂಲು ಹಾಕಿಯೆಷ್ಟು
ಬಟ್ಟನ್ನ ಕಲ್ಲಿಗೆ ಸುಣ್ಣಾ ತೊಟ್ಟು
ಕಣ್ಣಿಗೆ ಕಂಡೆಲ್ಲಾ
ಆ ಕಲ್ಲೇನೂ ಉಣಲಿಲ್ಲಾ
ಎಡೆಮಾಡಿ ನೀನೆ ಉಂಡೆಲ್ಲಾ ||೨||

ಮಂಗಳಾತ್ಮ ಶಿಶುನಾಳಧೀಶನಲ್ಲೆ
ಬಲ್ಲವರು ಕೂಡಿದರಲ್ಲೆ
ಶೃಂಗಾರವಾದ ನಾರೇರೆಲ್ಲಾ
ರಂಗಿನಿಂದ ಕೋಲ ಪಿಡಿದು
ಯೋಗದಿಂದ ತ್ಯಾಗಮಾಡಿ
ರಾಗದಲ್ಲೆ ಶಿವಶರಣರಲ್ಲೆ
ಶೀಗಿಗೆ ಕರೆದಾರಲ್ಲೆ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕೀಯ ಬಿಸಿನೆಸ್ಸು
Next post ಜೋಗುಳ ಪಾಡಿರಮ್ಮಾ

ಸಣ್ಣ ಕತೆ