ಜೋಗುಳ ಪಾಡಿರಮ್ಮಾ

ಜೋಗುಳ ಪಾಡಿರಮ್ಮಾ ಜಲಜಾಕ್ಷಿಯರೆಲ್ಲ
ಜೋಗುಳ ಪಾಡಿರಮ್ಮಾ ||ಪ||

ಜೋಗುಳ ಪಾಡಿರಿ ಶ್ರೀ ಗುರುಯೆನುತಲಿ
ಯೊಗಮಂದಿರದೊಳು ತೂಗುತ ಕಂದನ ||ಅ.ಪ.||

ಒಂದು ಹಿಡಿದು ಒಂಭತ್ತು ಬಾಗಿಲ ನಡು-
ಹಂದರದಲಿ ಸಂಧಿಸಿದ ಮಂಟಪದೊಳು
ಕುಂದಣ ಕೆಚ್ಚಿದ ತೊಟ್ಟಿಲೊಳಗೆ ಆ-
ನಂದದಿ ಮಲಗಿರು ಸುಂದರ ಕಂದನ ||೧||

ತಳಿರಡಿ ವಳದೊಡಿಗಳು ಬಾಳಿಯು ಸಮ ಶಶಿ ನಡು
ಸುಳಿನಾಭಿಯ ಮಗ್ಗಿಯ ಮಲಿ
ಯಳೆವಳಿಸುತ ತೋರುತ ಬಳ್ಕುತ ಬಂದು
ವಳ ಹಿಡಿದಾತ್ಮ ಮೈಯೊಳೊಪ್ಪುವ ||೨||

ಪಟ್ಟೆ ಪೀತಾಂಬರನುಟ್ಟು ಕುಂಚಿಕಿಯ
ತೊಟ್ಟು ಆಭರಣಗಳಿಟ್ಟು ಬರುವರು
ಪಟ್ಟಣದೊಳಗಿನ ದಿಟ್ಟ ಸಖಿಯರೆಲ್ಲ
ನಿಷ್ಠೆ ಹಿಡಿದು ನಿಜ ಆಲಯದೊಳಗೆ ||೩||

ಶಶಿಮುಖಿಯರು ವಿಲಾಸದಿ ಹಾಡುತ
ಕ್ಲೇಶವಳಿದು ಸಂತೋಷದಿ ಕೂಡುತ
ದೇಶಕಧಿಕ ಶಿಶುನಾಳಧೀಶನ
ಭಾಸುರ ಕಿರಣ ಪ್ರಕಾಶನಿಗೆ ||೪||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ
Next post ಕೇಳಯ್ಯ ಹುಲಿರಾಯ, ನಾನು ಮೆಟ್ಟಿದ ಭೂಮಿ ಬೆಳೆವುದು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys