ಓ ಯೋಗಿ ಶಿವಯೋಗಿ ವಿಶ್ವಶ೦ಕರ ಯೋಗಿ
ಶಿವಶಿವಾ ಶಿವಯೋಗಿ ನೀ ಇಳೆಗೆಬಾ
ರಂಭಾಪುರಿ ಪೀಠ ಮನುಜ ಪೀಠದ ಪಾಠ
ಮನೆಮನೆಗೆ ಹೊಸಬೆಳಗು ನೀ ಹೊತ್ತು ಬಾ
ಪಂಚಪೀಠದ ಸಿದ್ಧಿ ಪಂಚತತ್ವದ ಶುದ್ಧಿ
ಸಹ್ಯಾದ್ರಿ ವಿಂದ್ಯಾದ್ರಿ ಹೈಮಾದ್ರಿ ಓಂ
ಹಕ್ಕಿ ಹಾಡಿವೆ ಇಲ್ಲಿ ಕಡಲು ಆಡಿವೆ ಇಲ್ಲಿ
ಜ್ಞಾನಾಗ್ನಿ ದಿವ್ಯಾಗಿ ಪ್ರೇಮಾಗಿ ಓಂ
ನಿನ್ನಿಂದ ಮಳೆಬೆಳೆಯು ನಿನ್ನಿಂದ ಶುಭಬೆಳಗು
ಜಗಕೆ ಒಬ್ಬನೆ ತಂದೆ ನೀನೆ ಅಯ್ಯಾ
ನೀನೆ ಶಾಂತಿಯ ಕಡಲು ನೀನೆ ಸತ್ಯದ ಒಡಲು
ನೀನೊಬ್ಬನೆ ಜಗಕೆ ತಾಯಿಯಯ್ಯಾ
ಯುಗಯುಗದ ಯುಗದಾಚೆ ಕಾಲಕಲ್ಪದ ಆಚೆ
ಚಾಚಿರುವ ಚೈತನ್ಯ ಶಿವತಂದೆ ಬಾ
ಈ ಪೀಠ ಗುರುಪೀಠ ವೀರಭದ್ರನ ತೋಟ
ಮಾವು ಮಲ್ಲಿಗೆ ಜೇನು ಗುರುತಂದೆ ಬಾ
*****



















