ಬಾನಂಗಳದಿ ಹಾರುವ
ಹಕ್ಕಿಯ ರೆಕ್ಕೆಯು
ಮುರಿದಿದೆಯಲ್ಲ
ಹಕ್ಕಿಯ ರೆಕ್ಕೆಯು
ಮುರಿದಿದೆಯಲ್ಲ

ಚಿಲಿಪಿಲಿ ಎಂದು ಕೂಗುವ
ಹಕ್ಕಿಯ ಗಂಟಲು
ಕಟ್ಟಿದೆಯಲ್ಲ
ಹಕ್ಕಿಯ ಗಂಟಲು
ಕಟ್ಟಿದೆಯಲ್ಲ

ಗಿಡಮರದಲ್ಲಿಯ
ಹಚ್ಚನೆ ಹಸುರು
ಎಲೆಗಳು ಉದುರಿವೆಯಲ್ಲ
ಹಸುರಿನ ಎಲೆಗಳು
ಉದುರಿವೆಯಲ್ಲ

ಹಣ್ಣಿನ ಮರದಲಿ
ಕಾಯಿಗಳೆಲ್ಲ ಸುಮ್ಮನೆ
ಉದುರಿವೆಯಲ್ಲ
ಕಾಯ್ಗಳು ಸುಮ್ಮನೆ
ಉದುರಿವೆಯಲ್ಲ

ಬಾನಂಗಳದಿ ಹಾರುವ
ಹಕ್ಕಿಯ ರೆಕ್ಕೆಗೆ
ಬಲವಿಲ್ಲ
ಹಕ್ಕಿಯ ರೆಕ್ಕೆಗೆ
ಬಲವಿಲ್ಲ.

ಚಿಲಿಪಿಲಿ ಎಂದು ಹಾಡುವ
ಹಕ್ಕಿಯ ಸ್ವರದಲಿ
ಇಂಪಿಲ್ಲ
ಹಕ್ಕಿಯ ಸ್ವರದಲಿ
ಇಂಪಿಲ್ಲ

ಬಾನಂಗಳದಿ ಹಾರುವ
ಹಕ್ಕಿಗೆ ನೆಮ್ಮದಿ ಸಿಕ್ಕಿಲ್ಲ
ಹಕ್ಕಿಗೆ ಬದುಕಲು ನೆಲೆಯಿಲ್ಲ
ಗಿಡಮರ ಬೆಳೆಸಿ
ಕಾಡನು ಉಳಿಸಿ

ಹಕ್ಕಿಯ ಉಳಿಸೋಣ
ಬನ್ನಿ ಹಕ್ಕಿಯ
ಉಳಿಸೋಣ
ನಾವು ಹಕ್ಕಿಯ
ಉಳಿಸೋಣ.
*****