ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದನ್ನು ವಾತಾವರಣದಿಂದ ಪಡೆಯುವ ಬದಲು ಪ್ರಯೋಗಾಲಯದಲ್ಲಿಯೇ ಅಧಿಕ ವ್ರಮಾಣದಲ್ಲಿ ತಯಾರಿಸಿಕೊಳ್ಳಬಹುದು. ಓಝೋನ್ ಆಮ್ಲಜನಕವು ಒಂದು ಬಹುರೂಪಿಯಾಗಿದೆ. ಓಝೋನಿನ ಒಂದು ಅಣುವಿನಲಿ ಮೂರು ಆಮ್ಲ ಜನಕದ ಪರಮಾಣುಗಳಿರುತ್ತವೆ. ಓಝೋನಿನ ಅಣುಸೂತ್ರ O3 ಹೀಗಾಗಿ ಇದು ಒಳ್ಳೆಯ ಉತ್ಕರ್ಷಕಾರಿಯಾಗಿದೆ. ಮತ್ತು ದೃಢವಲ್ಲವ ಅನಿಲ ಕೂಡ ಬಹಳ ಬೇಗ ನಾಶವಾಗುತ್ತದೆ. ನೀರನ್ನು ಶುದ್ದಗೊಳಿಸಲು ಕ್ಲೋರಿನ್ ಆಮ್ಲಬಳಸಿದರೂ ಅದು ವಾಸನೆಯಿಂದ ಕೂಡಿರುತ್ತದೆ. ಕ್ಲೋರಿನ್ ನಿಂದ ಸಾವಯವ ಕ್ಲೋರಿನ್ ಸಂಯುಕ್ತಗಳು ಉಂಟಾಗುತ್ತವೆ. ಇದರಿಂದ ಕ್ಯಾನ್ಸರ್ ಬರಲೂಬಹುದು. ಓಝೋನ್‌ನಿಂದ ನೀರನ್ನು ಶುದ್ದಿಕರಿಸುವಾಗ ಈ ಅನಿಲವನ್ನು ಸ್ಥಳದಲ್ಲಿಯೇ ತಯಾರಿಸವುದು ಅತಿಮುಖ್ಯ ಏಕೆಂದರೆ ಇದು ದೃಢವಲ್ಲದ ಅನಿಲವಾಗಿದೆ. ವಾತಾವರಣದಲ್ಲಿಯ ಆಮ್ಲಜನಕವನ್ನು ಬಳಸಿಕೊಂಡು ಸರಳವಿಧಾನದಲ್ಲಿ ಓಝೋನನ್ನು ತಯಾರಿಸಬಹುದು. ಒಂದು ಗಂಟೆಯಲ್ಲಿ ಸು. ೩೧೫ ಕಿ. ಗ್ರಾಂ ನಷ್ಟು ಓಝೋನನ್ನು ಆಮ್ಲಜನಕದಿಂದ ತಯಾರಿಸಬಹುದಾಗಿದೆ. ಇದಕ್ಕೆ ನೀರಿನಲ್ಲಿಯ ಸೂಕ್ಷ್ಮಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಇದೆ. ಈ ಅನಿಲವನ್ನು ಅಶುದ್ದ ನೀರಿನ ಮೂಲಕ ಹಾಯಿಸಿದಾಗ ಓಝೋನ ಬ್ಯಾಕ್ಟೀರಿಯಾಗಳನ್ನು ಬಹುಬೇಗ ನಾಶಪಡಿಸುತ್ತದೆ. ಒಂದು ಲೀಟರ್ ಅಶುದ್ಧ ನೀರನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸಲು ಬೇಕಾಗುವ ಓಝೋನ್ ಪ್ರಮಾಣದಲ್ಲಿ ೦.೧ ಮಿಲಿ ಗ್ರಾಂ ಮಾತ್ರ. ಈ ಕ್ರಿಯೆಯಿಂದ ನಮಗೆ ಶೇ೯೯.೯ ಪ್ರಮಾಣದಲ್ಲಿ ಶುದ್ಧನೀರು ದೊರೆಯುತ್ತದೆ.

ಈ ತಂತ್ರಜ್ಞಾನವನ್ನು ಬಳಸಿಕೊಂಡು ಈಗಾಗಲೇ ಫ್ರಾನ್ಸ್, ಇಂಗ್ಲೆಂಡ್, ಅಮೇರಿಕಾ, ಕೋರಿಯಾ, ರಷಿಯಾ, ರುಮೆನೀಯಾ, ಕೆನಡಾ, ಟರ್ಕಿ ಮತ್ತು ಚೀನಾದೇಶಗಳಲ್ಲಿ ಈಗಾಗಲೇ ಅಶುದ್ಧನೀರನ್ನು ಶುದ್ಧೀಕರಿಸುತ್ತಿದ್ದಾರೆ. ಕೈಗಾರಿಕೆಗಳು ಹೊರಚೆಲ್ಲುವ ನೀರನ್ನು ಶುದ್ಧೀಕರಸಲು ಈ ತಂತ್ರವನ್ನು ಬಳಸಬಹುದೆಂದು ಫ್ರಾನ್ಸ್ ಹೇಳಿದ್ದಾರೆ.

ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಈ ಒಂದು ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ. ಈ ದಿಸೆಯಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ದಿಮಿಗಳು ಪ್ರಯತ್ನಿಸಿ ಸಾಮಾನ್ಯರಿಗೆ ಕುಡಿಯಲು ಶುದ್ದವಾದ ನೀರನ್ನು ದೊರಕಿಸಿಕೊಡಬಹುದಾಗಿದೆ.
*****