ಭಾವವೆಂಬ ಗಿಡ ಬಳ್ಳಿಯಲಿ

ಭಾವವೆಂಬ
ಗಿಡಬಳ್ಳಿಯಲಿ
ನಗುವ ಹೂವುಗಳೆ ||

ಮನವೆಂಬ
ರಸಪಾನದಲಿ
ಬದುಕ ಬಯಸುವ
ಚೆಲುವ ಕಂಗಳೆ ||

ಯಾರಗೊಡವೆ
ಇಲ್ಲದೆ ಯಾವ
ಸ್ವಾರ್ಥ ಬಯಸದೆ
ಅರಳಿದ ಹೂಗಳೇಽಽಽ ||

ಎಲ್ಲಿ ತೂರಿದವೂ
ನಿಮ್ಮ ಬಯಕೆಗಳು
ಎಲ್ಲಿ ಹೊಯ್ದವೂ
ನಿಮ್ಮ ನೆರಳು ||

ಬಾಳ ಬೆತ್ತಲೆ
ಕನಸುಣಿವ ದಳದಲಿ
ನುಸುಳದಿರಿ ರಜನಿಗಳೆ
ಬಾಡಿ ನಲುಗದಿರೀಽಽಽ ||

ಜೋಪಾನ ತೂಗಿರಿ
ಮೃಣಾಳ ನಾಳಕೆ
ನಿಂತು ಬೇರು ಆಗಸದತ್ತ
ನೋಡುವ ನಿಮ್ಮ ಬದುಕು ||

ಬಲ್ಲಿರಿ ನನ್ನ
ಮನದ ಒಡನಾಟವ
ಮಧುಮಗಳು ನಾನು
ಸಿಂಗರಿಸೆ ಬನ್ನಿರಿ
ಚೆಲುವ ಕೆಳೆಗಳೆ ||

ಸಾವು ನೋವು
ನಲಿವು ಒಲವಲ್ಲಿ
ಗೆಲುವು ಕಾಣುವ
ಪರಾಗ ಪುಷ್ಪಗಳೇ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾರ ಸುಬ್ಬ
Next post ನೀನೆ ಕವಿತೆಯ ಉಸಿರಾಗು

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…