ನಾನು ನಿನ್ನ ಪ್ರೀತಿ

ನಾನು ನಿನ್ನ ಪ್ರೀತಿ
ಕನಸನು ಹೆಣೆಯುವ ಹಕ್ಕಿ
ಮನಸಿನ ಭಾಷೆಯ ಚಿತ್ತಾರ
ಬಿಡಿಸುವ ಚುಕ್ಕಿ ||

ಪ್ರೇಮದ ಬಲೆಯನು ಬೀಸಿ
ವಿರಹದ ಎಳೆಯನು ಕಟ್ಟಿ
ಸ್ವಚ್ಚಂದ ಭಾವದ ಪ್ರೀತಿಯ
ಸೆಳೆಯುವ ಹಕ್ಕಿ ||

ನಿನ್ನನ್ನು ಕೂಡಿ ಗಗನಕೆ ಹಾರಿ
ಹಾರುತ ಹಾರುತ ಮೌನ ಮಾತಾಗಿ
ಬಯಕೆಯ ಹೊಮ್ಮಿ ಇಳೆಯನು
ತಣಿಸುವ ಹಕ್ಕಿ ||

ನೇಸರನು ಬರೆದ ಹಾಡಿಗೆ
ಮುತ್ತುಗಳ ಪೋಣಿಸಿ ಚಿಗುರಿದ
ಎಲೆಗಳ ಮರೆಯಲಿ ದನಿಯಾಗಿ
ನಾನು ನಿನ್ನ ಕರೆವ ಹಕ್ಕಿ ||

ನೂರಾರು ಹಾದಿಗಳ ಸುಳಿದ
ಸಾವೀರದ ಸರದಾರನ ಸಳೆದು
ಪ್ರೀತಿ ಪ್ರೇಮದ ಹೂಮಾಲೆ ಹಿಡಿದು
ವಧುವಾಗಿ ನಿಂತ ಹಕ್ಕಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯೊಡೆದ ಚೀಲ
Next post ಬೆಳಕನು ಅರಸಿ ಹೊರಟೆ

ಸಣ್ಣ ಕತೆ