ಆ ಕಡಲ ನೀರ

ಆ ಕಡಲ ನೀರ ಭಾವನೆಗಳ
ಅಲೆಗಳಲ್ಲಿ ನಿನ್ನ ರೂಪದರ್‍ಶನ
ಜುಳು ಜುಳು ನಾದದೊಡಲಲಿ
ನಮ್ಮ ಪ್ರೇಮಗೀತ ಗಾಯನ ||

ತಬ್ಬಿ ತರುವನ ಹಬ್ಬಿ ಬೆಳೆಯುವ
ಲತೆಯ ಮೊಗದಲಿ ಸಂಭ್ರಮ
ನನ್ನ ನಿನ್ನಾ ಬೆಸುಗೆ ಬಿಸುಪಲಿ
ಪಡೆದ ಸಂತಸ ಅನುಪಮ ||

ಬಿರಿದ ತಾವರೆ ಒಡಲ ಮಧುವಿಗೆ
ಭೃಂಗ ವೃಂದವು ನೆರೆದಿದೆ
ನಿನ್ನ ಅರಳಿದ ಮೊಗವ ನೋಡಲು
ನನ್ನ ಹೃದಯವು ಕಾದಿದೆ ||

ಪೊದೆಯ ಮರೆಯ ನವಿಲ ನಾಟ್ಯಕೆ
ವನಬನವು ಸಂಭ್ರಮಿಸಿದೆ
ನಿನ್ನ ನಡಿಗೆಯ ನಾಟ್ಯದಲಿ
ಅಂಥ ಅನುಪಮ ಚೆಲುವಿದೆ ||

ಮುಗಿಲ ಚಂದ್ರನ ಮೊಗದ ಕಾಂತಿಯು
ನಿನ್ನ ಮೊಗದಲಿ ಅರಳಿದೆ
ನಿನ್ನ ನಗುವಲ್ಲಿ ತಿಂಗಳ
ಬೆಳಕು ಧಾರೆಯು ಹರಿದಿದೆ ||

ನಗುವ ಹೂವದು ಬಳ್ಳಿ ಬಳುಕ
ಉಲಿವ ಕೋಗಿಲೆ ಕೊರಳಲಿ
ನಿನ್ನ ರೂಪಿದೆ ನಿನ್ನ ದನಿಯಿದೆ
ಎನ್ನ ಕೂಗಿ ಕರೆದಿದೆ ||

ನನ್ನ ಪ್ರೀತಿಸಿ ನನ್ನ ಕಾಡಿಸಿ
ನನ್ನ ಹೃದಯವ ತಣಿಸಿ
ಎಲ್ಲಿ ಹೋದೆ ಕಾಯುತಿರುವೆ
ನಿನಗಾಗಿ ಕಾದಿರುವ ಗೆಳೆಯ ||
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ವರ್ಷದ ಕನ್ನಡ ಸಾಹಿತ್ಯ
Next post ರಹದಾರಿ

ಸಣ್ಣ ಕತೆ