ಬಾ ಬಾ ಬಾರೆ ಕೋಗಿಲೆ
ಎಲೆ ಮರೆಯಲಿ ಕುಳಿತಿರುವೆ ಏಕೆ||

ಬೆಳದಿಂಗಳ ಕೆಳೆಯಲಿ
ಮಿಥಿಲೆಯು ನಿನ್ನ ಸ್ವಾಗತಿಸಲು
ಸನ್ನದ್ಧವಾಗಿದೆ||

ಒಲವಿನಾಸರೆಯ ಬಾಳಿಗೆ
ಇಂದೇ ಬರುವುದು ಚೈತ್ರ
ನಾಳೆಗಾಗಿ ಕಾಯುವೆ ಏಕೆ||

ಶ್ರೀರಾಮ ಬರುವನೇ ರಘುರಾಮ
ಬಂದಿಹನೆ ಮುನಿಸೇಕೆ ಜಾಣೆ||

ಕಾದಿಹವು ವನಸುಮಗಳು
ನಿನ್ನ ಬರುವಿಕೆಗಾಗಿ
ಅಂತಃಕರಣ ಭಾವವನು ಕೇಳಲು||

ಮೂಡಿಹನೇ ರವಿತೇಜ
ವೈಭವದಿ ಪ್ರಕೃತಿಯು
ನೀನೇಕೆ ಮುನಿಸಿಕೊಂಡಿಹೆ ಹೇಳೆ||

ಸೀತಾ ಸಮೇತ ಲಕ್ಷಣ ಸಹಿತ
ಹನುಮಧ್ವಜರು ಬಂದಿಹರು
ಸ್ವರ್‍ಗವಾಗಿಹ ಮಿಥಿಲಾ
ಕಳೆಗುಂದಿದೆ ನಿನ್ನ ಕಾಣದೆ
ನಿನ್ನ ಹಾಡು ಕೇಳದೆ||

ಜನುಮದಾ ಪುಣ್ಯಫಲ
ಜನ್ಮ ಮುಕ್ತ ಸ್ತ್ರೀ ಧರೆಯು
ಎನ್ನ ಮಾತ ಕೇಳೆ ಹಕ್ಕಿಯು
ಪಂಜರ ಎಂಬ ಮನುಜ
ಮಾತು ಕೇಳಲೇಕೆ||

ದಿಟ್ಟತನ ತೋರಿ ಸ್ವಾರ್‍ಥವನಳಿಸಿ
ನಿಸ್ವಾರ್‍ಥದ ನಿನ್ನ ಸಿರಿತನದ
ದನಿಯ ಇಂಪಿಗೆ ತಣಿಸು ಶ್ರೀರಾಮನ||

ಕೊಟ್ಟಾರೆ ಕೊಡುವನು ನಿನ್ನ
ದನಿಯ ಕೇಳಿ ವರವನು
ಶ್ರೀರಾಮನವ ಕರುಣಾಧೀನ ಪುರುಷೋತ್ತಮನು||
*****