ಶಶಿಯೆ ನೀ ಹಾಡು ಹಾಡು

ಬಾಳಿನಂದದ ರೂಪದ
ಒಲವಿಂದ ವೃಂದದಲಿ ಕೂಡಿ ನಲಿದು
ಬಾರೆ ಬಾರೆ ಜಗವ ತಣಿಸುತಲಿ
ಕುಣಿದು ನಲಿದು ಮನವ ತಣಿಸೆ
ಆನಂದದಲಿ ಗರಿಗೆದರಿ ಕೂಡಿ ಒಲಿದು
ಬಾರೆ ಬಾರೆ ಬಾ ತಾಯೆ||

ಶೃಂಗಾರ ಕಾವ್ಯದಲಿ ಹೊನ್ನಕುಂಚದಲಿ
ನಲಿನಾಟ್ಯ ಸಮರಸ ಭಾವದೊಲಮೆಯಲಿ
ನಲಿಯೆ ಒಲಿಯೆ ಬಾರೆ ಬಾರೆ ಬಾ ತಾಯೆ
ಬೆಡಗಿನಂದದ ರೂಪದಲಿ ಹರುಷದ
ಹೊನಲ ಚಿಮ್ಮಿ ಬಾರೆ ತಾಯೆ ||

ಬಾರೆ ಬಾರೆ ಬಾ ತಾಯೆ
ಕರವ ಮುಗಿವೆ ವರವೊಂದ ಬೇಡುತ
ಭಕುತಿಯಿಂದಲಿ ಶರಣೆಂಬೆ ತಾಯೆ
ಪೊರೆಯೆ ಬಾ ಬಾರೆ ತಾಯೆ ಒಲಿದು ಬಾ
ನಲಿದು ಬಾ ಶ್ವೇತ ಕಮಲೆಯೆ
ಕುಂಭ ಲೋಚನೆ ಬಾ ಬಾರೆ ಬಾ
ಮನದಿ ನಿಂದು ಒಲಿಯೆ ಬಾ ತಾಯೆ
ಕರುಣಾಸಾಗರಿ ಆನಂದ ವಿಹಾರಿ
ನಮೋ ನಮೋ ನಮಿಸುವೆ ದೇವಿಯೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ
Next post ಋಣೋದಯ

ಸಣ್ಣ ಕತೆ