ಬದುಕಿನಲಿ ನಿ ಒಂಟಿಯಾಗು ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ ನೀನು ಹೃದಯದಲಿ ಮಡಿವಂತನಾಗು ಹಗಲಿರುಳು ದೇವ ನುಡಿ ನುಡಿಯಲಿ ಯಾವ ಜನುಮದಿ ಎಂಥವರೊ ನಿನಗೆ ನಾಳಿನ ಬಾಳಿಗೊ ಇನ್ನಾರೊ ಯಾರೋ ಇಂದಿನ ಕ್ಷಣಗಳಲಿ ಸಾರ್‍ಥಕವಾಗಲು ನಿತ್ಯ ಶುದ್ಧಮನದ ತಿದ...

ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...

ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ...

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ|| ಅದ್ದಽನ ಬೀಸಽ ಗಿದ್ದಽನ ಕುಟ್ಟ| ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ|| ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ| ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ|| ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ|| ಅಂಟಽದ ತೆಳೆಗ ಇಟ್ಟಾನೊ...

ಫ್ರಿಜ್‌ಗಳಲ್ಲಿ ಪ್ರಿಯಾನ್‌, ಅನಿಲವು ಬಳಕೆಯಾಗುತ್ತದೆ. ಈ ಅನಿಲವೂ ಸಹ ಪರಿಸರದ ಮೇಲೆ ದುಷ್ಟರಿಣಾಮವನ್ನು ಬೀರುತ್ತದೆ. ಭೂ ಮಂಡಲವನ್ನು ಸುತ್ತುವರೆದಿದ್ದು ಭೂಮಿಯ ಸಕಲಜೀವಿಗಳನ್ನೂ ಸೂರ್‍ಯನ ಅಪಾಯಕಾರಿ ಅಲ್ಟ್ರಾ ವಾಯೊಲೆಟ್ ಕಿರಣಗಳಿಂದ ರಕ್ಷಿಸುವ ...

ಮರಣತ ಪರಮೆನ್ನ ಜಿಜ್ಞಾಸೆಯೊಡೆಯಾ- ಹುಟ್ಟ ಹೊರವಟ್ಟು ಬಾಳ್ವೆಯ ಮುಟ್ಟೆ ಕಡೆಯಾ, ಮುಂತಡೆವರೇ ಕಡದಿ ಕತ್ತಲೆಯ ತಡಿಯಾ? ೩ ಆವಂಬಿಗಂ ಬರುವ ಪರಿಸೆಯಂ ಕಾಯ್ವಂ? ಎಂತೆಲ್ಲಿಗೆನ್ನೆಗಂ ತೊರೆಯಾಚೆ ಹಾಯ್ವಂ? ಅಲ್ಲಿಂದ ಮುಂದವರನಾರೆಲ್ಲಿಗೊಯ್ವಂ? ೬ ಕಡವಿಹವೆ...

ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು ಸಿಂಗರದ ಈ ಬೀಡು ಕವಿಗಳೆದೆ ಹಾಡು ಹಾಡು ತುಂಬಿದ ನಾಡ...

ರಮೇಶ ಮಧ್ಯ ವಯಸ್ಕರನಾಗಿದ್ದರೂ ಸುಂದರವಾಗಿದ್ದ. ತಾನೇ ನೋಡಿ ಮೆಚ್ಚಿ ಸುಮತಿಯನ್ನು ಮದುವೆಯಾಗಿದ್ದ. ಆತನು ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ. ತಿಂಗಳುಗಳು ಉರುಳಿದಂತೆ ರಮೇಶನ ಮುಖ ಬಿದಗೆಯ ಚಂದ್ರನಂತೆ ಕಳೆಗುಂದುತ್ತಾ ಬಂದಿತು. ಮುಖದಲ್ಲಿ ನಗು...

1...6263646566...110

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...