ಕ್ವ?

ಮರಣತ ಪರಮೆನ್ನ ಜಿಜ್ಞಾಸೆಯೊಡೆಯಾ-
ಹುಟ್ಟ ಹೊರವಟ್ಟು ಬಾಳ್ವೆಯ ಮುಟ್ಟೆ ಕಡೆಯಾ,
ಮುಂತಡೆವರೇ ಕಡದಿ ಕತ್ತಲೆಯ ತಡಿಯಾ? ೩

ಆವಂಬಿಗಂ ಬರುವ ಪರಿಸೆಯಂ ಕಾಯ್ವಂ?
ಎಂತೆಲ್ಲಿಗೆನ್ನೆಗಂ ತೊರೆಯಾಚೆ ಹಾಯ್ವಂ?
ಅಲ್ಲಿಂದ ಮುಂದವರನಾರೆಲ್ಲಿಗೊಯ್ವಂ? ೬

ಕಡವಿಹವೆ ಮುಂದಿದೇನೊಂದೆ ಕಡವಿಂತೆ?
ಇನ್ನುಮಿರೆ, ಕಡಕಡದ ನಡುನಡುವೆ ಮುಂತೆ
ಚಾಚಿಹವೆ ಬಾಳ್ವೆ? ಇರಲೇ ಪರಿಯವಂತೆ? ೯

ಪಯಣಗತಿ ಎಂತಾಚೆ? ಯಾವ ಮೇರೆವರಂ?
ಅಲ್ಲಿ ನೆಲೆವರೆ? ಮರಳ್ಚುವರೆ ಇಲ್ಲಿಗವರಂ?
ನೆನೆವರೇಂ ಮರೆವರೇನಲ್ಲಿ ಇಲ್ಲಿದರಂ? ೧೨

ಮುಗಿವುದೆಂದೀ ಯಾತ್ರೆ? ತುದಿ ಮೊದಲಿನೊಂದೆ
ಬಾಳ್ವೆ ಇದೊ? ಹಲನೆರೊಳಗೊಂದೊ? ಇಲ್ಲಿಂದೆ
ಅಂದಂದಗಲ್ದರೊಂದಾಗುವರೆ ಮುಂದೆ? ೧೫

ಎಲ್ಲಿಗೆಂದರಿಯದಲ್ಲಿಗೆ ಸರಿಯಲಲ್ಲಿ
ನಿನ್ನ ಕಾಂಬುದೆ ಬಾಳ್ವೆಯರಸಿದುದನಿಲ್ಲಿ?
ಇಲ್ಲಡಕಟಲ್ಲಿಗಲ್ಲಿಗೆ ಭೇದವೆಲ್ಲಿ? ೧೮
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡದ ಜನ
Next post ಫ್ರಿಜ್ ನಿಂದಾಗುವ ಹಾನಿಕಾರಕ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…