ನಮ್ಮ ಲಾಕರ್‌ನಲ್ಲಿ ಏನೇನಿದೆ ಎಂಬುದು ಒಂದು ರಹಸ್ಯ. ಲಾಕರ್‌ನಲ್ಲಿ ಏನಿದೆ? ಎನ್ನುವುದು ಮುಖ್ಯವಲ್ಲ. ಏನೂ ಇಲ್ಲ ಎನ್ನುವುದು ಯಾರಿಗೂ ತಿಳಿಯುವುದಿಲ್ಲ! ಅದೇ ದೊಡ್ಡ ರಹಸ್ಯ. *****...

ಓದಿನಲ್ಲಿ ಹಲವು ರೀತಿಗಳಿರುತ್ತವೆ: ಕೆಲವು ಪಠ್ಯಗಳನ್ನು ನಾವು ಶೀಘ್ರಗತಿಯಲ್ಲಿ ಓದಿ ಮುಗಿಸುತ್ತೇವೆ: ಯಾಕೆಂದರೆ ಅವುಗಳ ಸಾರಾಂಶವಷ್ಟೇ ನಮಗೆ ಬೇಕಾಗುವುದು -ಪತ್ರಗಳು, ಪತ್ರಿಕೆಗಳು, ಜನಪ್ರಿಯ ಕತೆ ಕಾದಂಬರಿಗಳು ಇತ್ಯಾದಿ. ಇನ್ನು ಕೆಲವನ್ನು ನಿಧಾ...

೧. ವೋಹೋ ಸೋ (ತೋ ) ವೋ ಹೋ ಯ (ಶುರುವಲ್ಲಿ) ೨. ವೋಹೋ ತೋಯ್ ವೋಹೋಯ್ ೩. ವೋಹೋತೋ ವೋಯ್ ೪. ವೋಹೋಚೋಯ್ ವೋ ಹೈ ೫. ವೋಹೋೖ ವೋಹೋ ತೋ ವೋಹೋೖ ವೋ ಹೋ ತೋ ೬. ವೋಹೋ ಚೋ ೭. ವೋ ಹೋ ಚೊ, ವೋ ಹೋ ಚೊ, ವೋ ಹೋ ಚೊ ೮. ಚೋಯ್ ೯. ಚಾವೋ ಚೋ ಸೋ ಸೋ ಸೋ ಸೋ (ಕುಂ...

ಒಪ್ಪವೀ ಜಗವು ಇಲ್ಲಿರ್‍ಪೆಲ್ಲ ಜೀವಿಯುಂ ತಪ್ಪದೀ ಜಗದ ನಿಯಮದೊಳನ್ನ ಪಡೆಯು ತಿರ್‍ಪುದಿದನು ಕಂಡಾದಿ ಋಷಿಗಳುಸುರಿದ ವೇದ ವೊಪ್ಪುವ ಕೃಷಿಯ ಮೀರಿರಲೆಲ್ಲೆಡೆಗಲ್ಲೋಲಕಲ್ಲೋಲ ತಪ್ಪನಿನ್ನೊಂದು ತಪ್ಪಿನಲಿ ತಿದ್ದುವುದ್ಯೋಗಕಿದು ಕಾಲವಾಯ್ತಲಾ – ವಿ...

ಬಾ ಗೆಳೆಯ ಬಾ ಹೃದಯದಂಗಳದಲ್ಲಿ ಚಿತ್ತಾರ ಬಿಡಿಸು ಬಾ ಬಾನಿನಂಗಳದಲ್ಲಿ ಚಂದಿರ ನೀನಾಗು ಬಾ ನೀ ಬರುವಿಯೆಂದು ಕಾಯುತಿರುವೆ ಕಾತುರದೆ ಇಹಪರವ ಮರೆತು ಹೃದಯ ಬಾಗಿಲು ತೆರೆದು ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ ಮುಗುಳ್ಳಗೆಯ ಮಲ್ಲಿಗೆ ಮುಡಿದು ಮೌನ ಬಂಗಾ...

ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ಆಡಿನ ಮರಿ ಆನೆಯಾಗಬಲ್ಲುದೆ ಸೀಳುನಾಯಿ ಸಿಂಹದ ಮರಿಯಾಗಬಲ್ಲುದೆ ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಆಮುಗೇಶ್ವರಾ [ಗಾವಿಲ-ಹಳ್ಳಿಗ, ಅಶಿಕ್ಷಿತ] ಆಮುಗೆ ರಾಯಮ್...

-ದ್ರೋಣನು ಹಸ್ತಿನಾಪುರದ ಅರಸುಮಕ್ಕಳಿಗೆ ಶಸ್ತ್ರವಿದ್ಯಾಪ್ರದರ್ಶನವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಅರ್ಜುನನಿಗೆ ಸವಾಲಾಗಿ ಸಭೆಯ ಮಧ್ಯದಿಂದ ಎದ್ದು ಬಂದ ಸೂತಪುತ್ರನೆನಿಸಿದ್ದ ಧೀರನಾದ ಕರ್ಣನನ್ನು ಹೀನಕುಲದವನೆಂಬ ನೆಪದಲ್ಲಿ ದೂರವಿಡಲೆತ್ನಿಸಿದ ...

1...2829303132...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...