ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು – ವಿಜ್ಞಾ...

ಕಮಲದೆಲೆಯ ಮೇಲೆ ಜಲದ ಬಿಂದು ಎಂದೂ ನಿಲ್ಲದು ವಿಮಲ ಮಾನಸ ದಲದ ಮೇಲೆ ಮಲಿನ ಚಿಂತನೆ ಬಾರದು ರಾತ್ರಿ ಸಮಯದಿ ದೂರಗಾಮಿ ದೀಪ ಹೇಗೆ ಹೊಳೆವುದು ಹಾಗೆ ಮಸ್ತಕ ಮಣಿಯು ಫಳಫಳ ಹೊಳೆದು ಕತ್ತಲೆ ಕಳೆವುದು ಎರಡು ಕಣ್ಣೊಳು ಜ್ಞಾನಯೋಗದ ಜೋಡು ದೀಪಾ ಬೆಳಗಲಿ ಆತ್...

ಬದುಕುತ್ತೇನೆ ಗೆಳೆಯಾ ನೀನಿಲ್ಲದೆಯೂ ಬದುಕುತ್ತೇನೆ ನಾನು ನಾನಾಗಿ ನಶ್ವರದ ಪಯಣದಲಿ ಅಗಲುವಿಕೆ ಅನಿವಾರ್ಯತೆ ಒಂಟಿತನ ಸಹಜ ತಾನೇ ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ ಸವಿಯಾಗಿ ಮಾತನಾಡಿ ಹೊಂಗನಸಿನಲಿ ತೇಲಾಡಿಸಿ ಅಣುಅಣುವಿನಲ್ಲಿ ನೀನಾಗಿದ್ದೆ ಅತ...

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧ...

-ಅರಗಿನಮನೆಯ ಅವಘಡದಿಂದ ಪಾರಾಗಿ ಕಾಡಿಗೆ ಬಂದ ಪಾಂಡವರು ಹಿಡಿಂಬವನವನು ತಲುಪಿದರು. ಅಲ್ಲಿ ಭೀಮನು ಹಿಡಿಂಬನನ್ನು ವಧಿಸಿ ರಾಕ್ಷಸಕನ್ಯೆಯಾದ ಹಿಡಿಂಬೆಯನ್ನು ಮದುವೆಯಾದ. ಒಂದು ವರ್ಷ ಕಾಲ ಕಳೆಯುವಷ್ಟರಲ್ಲಿ ಭೀಮನಿಗೆ ಪುತ್ರೋತ್ಸವವಾಗಲು, ಅವನಿಗೆ ಘಟೋ...

ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ ಹರಿದು ಮೂರು ಸಂಜೆಯ ಹೊತ್ತು ನೀಲಾಂಜನದ ಬೆಳಕು ಹರಡಿದ ...

ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ ಬರುವ ಕನ್ನಡ || ಸುಂದರ ಸುಮಧುರ ಕನ್ನಡ ಗಿರಿಧಾಮಗಳೆ...

ದೇವಿ ನೀನು ಈ ಜಗವನ್ನ ಆಡಿಸುವಾಕೆ ನೀನೇ ಮಾಯೆ ಸಕಲ ಜೀವಾತ್ಮಗಳ ತಾಯೆ ನೀನೇ ಕಾಯ ಮೋಡಗಳ ಮರೆಯಲಿ ಚಂದ್ರ ಅವಿತರೆ ಇಲ್ಲವಾದನೇ ರಾತ್ರಿಯ ಕತ್ತಲಿನಲಿ ಸೂರ್‍ಯ ಕಾಣದಾದರೆ ಕರಗಿದನೇ ಹುಚ್ಚು ಭ್ರಮೆಗೆ ಮನುಜ ಲೋಕವೆ ಸತ್ಯವೆಂದಿಹನು ಉಸಿರು ನಿಂತರಾಯ್ತು...

ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ. ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ ಕೊಟ್ಟನು. ...

ಒಳುಬೇರಿನಲ್ಲೆ ಕಡುಬೇರೆಯಾಗಿ ಚೊಕ್ಕಾದ ರೂಪವಾಂತು ವರ ಬೇಡಿಕೊಂಬ ಸ್ಥಿರಲಗ್ನ ಬಂತು ಹತ್ತಿರಕೆ ಹೊತ್ತು ಬಂತು ಹೇ ದೊರೆಯೆ ನಿನ್ನ ವಿಜಯಕ್ಕೆ ತಕ್ಕ ಮತಿಯೇರುವಂತೆ ಮಾಡು ಸಟಿ ತಳ್ಳಿ ನಿನ್ನ ದಿಟದಲ್ಲಿ ಮೂಡಿ ಬರುವಂಥ ಬಲವ ನೀಡು *****...

1...1819202122...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...